ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 47 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಬ್ಯಾಟಿಂಗ್ ಮಾಡಿದ ಆರ್ಸಿಬಿ 187 ರನ್ ಗಳಿಸಿತು. 188 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ಗಳಲ್ಲಿ ಕೇವಲ 140 ರನ್ ಗಳಿಸಿ ಆಲೌಟ್ ಆಯಿತು.
ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿಗೆ ಆರ್ಸಿಬಿ ಬೌಲರ್ಗಳ ದೊಡ್ಡ ಆಘಾತ ನೀಡಿದ್ದಾರೆ. 4 ಓವರ್ಗಳಲ್ಲಿ 4 ಕಬಳಿಸಿದರು. ಸಂಕಷ್ಟದಲ್ಲಿದ್ದ ಡೆಲ್ಲಿಗೆ ನಾಯಕ ಅಕ್ಸರ್ ಪಟೇಲ್ 57 ಆಸರೆಯಾದರು. ಹೋಪ್ 26 ರನ್ ಗಳಿಸಿದರು. ಉಳಿದ ಯಾವೊಬ್ಬ ಬ್ಯಾಟರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಆರ್ಸಿಬಿ ಪರ ಯಶ್ ದಯಾಳ್ 3, ಫರ್ಗುಸನ್ 2, ಸ್ವಪ್ನಿಲ್, ಮೊಹಮ್ಮದ್ ಸಿರಾಜ್, ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಆರ್ಸಿಬಿ ಪರ ರಜತ್ ಪಾಟೀದಾರ್ 52, ವಿಲ್ ಜಾಕ್ಸ್ 41, ವಿರಾಟ್ ಕೊಹ್ಲಿ 27, ಕ್ಯಾಮೆರೂನ್ ಗ್ರೀನ್ ಅಜೇಯ 32 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್ ಹಾಗೂ ರಸಿಖ್ ಸಲಾಂ ತಲಾ 2, ಇಶಾಂತ್ ಶರ್ಮಾ ಹಾಗೂ ಮುಖೇಶ್ ತಲಾ ಒಂದು ವಿಕೆಟ್ ಪಡೆದರು.
Wrapped up in style ⚡️
High fives 🙌 all around as #RCB make it FIVE 🖐️ in a row 🔥
A comfortable 4️⃣7️⃣-run win at home 🥳
Scorecard ▶️ https://t.co/AFDOfgLefa#TATAIPL | #RCBvDC pic.twitter.com/qhCm0AwUIE
— IndianPremierLeague (@IPL) May 12, 2024