Sunday, October 6, 2024

ಸೋನಂ ಕಪೂರ್​ಗೆ ₹231 ಕೋಟಿ ಬೆಲೆಯ ಅಪಾರ್ಟ್​​ಮೆಂಟ್ ಗಿಫ್ಟ್​​​​

ಸೋನಂ ಕಪೂರ್ ಅವರು ಹಾಯಾಗಿ ಸಂಸಾರ ನಡೆಸಿಕೊಂಡಿದ್ದಾರೆ. ಅವರು ಉದ್ಯಮಿ ಆನಂದ್ ಅಹೂಜಾ ಅವರನ್ನು ವರಿಸಿದ್ದು, ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್​ನಲ್ಲಿ ಅಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಮಾವ ಈಗ ಲಂಡನ್​ನ ನೋಟಿಂಗ್ ಹಿಲ್​ ಜಿಲ್ಲೆಯಲ್ಲಿ ಪ್ರಾಪರ್ಟಿ ಖರೀaದಿ ಮಾಡಿದ್ದಾರೆ. ಇದು ಎಂಟಸ್ತಿನ ಕಟ್ಟಡ ಆಗಿದ್ದು, ಇದರ ಬೆಲೆ ಬರೋಬ್ಬರಿ 231.47 ಕೋಟಿ ರೂಪಾಯಿ.

ಇಂಗ್ಲೆಂಡ್​ನಲ್ಲಿ ನಡೆದ ದೊಡ್ಡ ಡೀಲ್​ಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಮಗ ಹಾಗೂ ಸೊಸೆಗೆ ಇದನ್ನು ಉಡುಗೊರೆಯಾಗಿ ನೀಡುವ ಆಲೋಚನೆಯಲ್ಲಿ ಅವರಿದ್ದಾರಂತೆ. ಚಾರಿಟೆಬಲ್ ಆರ್ಗನೈಸೇಷನ್​ನವರು ಈ ಕಟ್ಟಡವನ್ನು ಹೊಂದಿದ್ದರು. ಇದು ಪ್ರಮುಖ ಜಾಗದಲ್ಲಿ ಇತ್ತು. ಇದನ್ನು ಖರೀದಿ ಮಾಡಿ ಮಗ ಆನಂದ್ ಹಾಗೂ ಸೊಸೆ ಸೋನಂ ಕಪೂರ್​ಗೆ ಬಿಟ್ಟುಕೊಡಬೇಕು ಎನ್ನುವ ಆಲೋಚನೆ ಅವರಿಗೆ ಬಂದಿದೆ.

ಇದು ಲಕ್ಷುರಿ ಅಪಾರ್ಟ್​ಮೆಂಟ್ ಆಗಿ ಬದಲಾಗಲಿದೆ. 2018ರಲ್ಲಿ ಸೋನಂ ಹಾಗೂ ಆನಂದ್ ಅಹೂಜಾ ವಿವಾಹ ಆದರು. 2022ರಲ್ಲಿ ಸೋನಂಗೆ ಗಂಡು ಮಗು ಜನಿಸಿತು. ಈತನಿಗೆ ವಾಯು ಎಂದು ಹೆಸರು ಇಡಲಾಗಿದೆ. ಈ ದಂಪತಿ ಸಮಯ ಸಿಕ್ಕಾಗ ಲಂಡನ್​ನಿಂದ ಮುಂಬೈಗೆ ಬರುತ್ತಾ ಇರುತ್ತಾರೆ. ಸೋನಂ ಕಪೂರ್ ಅವರು ಲಂಡನ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ.

RELATED ARTICLES

Related Articles

TRENDING ARTICLES