Friday, September 20, 2024

ಬ್ಲಡ್​ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ: ಆತಂಕ ವ್ಯಕ್ತಪಡಿಸಿದ ವೈದ್ಯರು!

ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬ್ಲಡ್ ಬ್ಯಾಂಕ್​ನಲ್ಲಿ ರಕ್ತ ಶೇಖರಣೆ ಕಡಿಮೆಯಾಗಿದ್ದು ತುರ್ತು ಸಂದರ್ಭದಲ್ಲಿ ರಕ್ತ ವಿತರಣೆಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೋತ್ತಾನ ರಕ್ತ ಕೇಂದ್ರದ ವೈದ್ಯರಾದ ಡಾ.ಸುಮಿತ್ರಾ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿ ಅವರು, ರಾಷ್ಟ್ರೋತ್ತಾನ ರಕ್ತ ಕೇಂದ್ರದಲ್ಲಿ ಪ್ರತಿ ತಿಂಗಳು ಸುಮಾರು ಎರಡು ವರೆ ಸಾವಿರದಿಂದ ಮೂರು ಸಾವಿರ ಯೂನಿಟ್​ಗಳ ವರೆಗೆ ರಕ್ತ ಸಂಗ್ರಹ ಮತ್ತು ವಾರ್ಷಿಕವಾಗಿ ಸುಮಾರು 32 ಸಾವಿರ ಯೂನಿಟ್​​ನಷ್ಟು ರಕ್ತ ಶೇಖರೆಯಾಗುತ್ತಿತ್ತು. ಆದರೇ, 2024ರ ಜನವರಿಯಿಂದ ಈ ಪ್ರಮಾಣ ಕಡಿಮೆಯಾಗಿದ್ದು ರಕ್ತ ಶೇಖರಣೆಯಲ್ಲಿ ಕೊರತೆ ಉಂಟಾಗಿದೆ ಎಂದರು.

ಇದನ್ನೂ ಓದಿ: ಕಲಬುರ್ಗಿಯಲ್ಲಿ ಚುನಾವಣೆ ರಣಕಹಳೆ: ಖರ್ಗೆ ತವರಿನಿಂದಲೇ ಪ್ರಧಾನಿ ಮೋದಿ ರ್ಯಾಲಿ ಆರಂಭ

ಬೇಸಿಗೆ ಆರಂಭ ಮತ್ತು ಕಾಲೇಜುಗಳ ಶೈಕ್ಷಣಿಕ ವರ್ಷ ಕೊನೆಯ ಹಂತದಲ್ಲಿದೆ ಜೊತೆಗೆ ಚುನಾವಣೆಗಳು ಬರುತ್ತಿದ್ದು ನೀತಿಸಂಹಿತೆ ಜಾರಿಯಾದರೇ ಸಾರ್ವಜನಿಕವಾಗಿ ಜನರು ಸಭೆ ಸೇರಿ ಕಾರ್ಯಕ್ರಮಗಳ ಆಯೋಜನೆ ನಡೆಯುವುದು ನಿಲ್ಲುತ್ತದೆ ಇದೆಲ್ಲಾ ಕಾರಣಗಳಿಂದಾಗಿ ರಕ್ತ ಶೇಖರಣೆಯಲ್ಲಿ ಕೊರೆಯುಂಟಾಗಿದೆ.

ಈ ಬಾರಿ ರಕ್ತದ ಕೊರತೆಯಿಂದಾಗಿ ಹೊರಗಿನ ರೋಗಿಗಳಿಗೆ ನೀಡುವ ಪ್ರಮಾಣಕ್ಕಿಂತ ಸಂರಕ್ಷಾ ಎಂಬ ಡಿಕೇರ್​ ಸೆಂಟರ್​ ನಲ್ಲಿರುವ ಮಕ್ಕಳಿಗೆ ಪ್ರತಿ ದಿನ 50 ರಿಂದ 60 ಯೂನಿಟ್​ಗಳಷ್ಟು ರಕ್ತ ಅವಶ್ಯಕತೆ ಇರುತ್ತದೆ, ಅವರಿಗೆ ರಕ್ತ ಒದಗಿಸುವುದು ನಮಗೆ ಸವಾಲಾಗಿದೆ. ಹೀಗಾಗಿ ಅರ್ಹ ರಕ್ತದಾನಿಗಳು ಹೆಚ್ಚಿನ ರೀತಿಯಲ್ಲಿ ಬೆಂಗಳೂರಿನ ರಾಷ್ಟ್ರೋತ್ತಾನ ಕಚೇರಿಗೆ ಭೇಟಿ ನೀಡುವ ಮೂಲಕ ರಕ್ತವನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES