Friday, May 3, 2024

ಕಲಬುರ್ಗಿಯಲ್ಲಿ ಚುನಾವಣೆ ರಣಕಹಳೆ: ಖರ್ಗೆ ತವರಿನಿಂದಲೇ ಪ್ರಧಾನಿ ಮೋದಿ ರ್ಯಾಲಿ ಆರಂಭ

ಕಲಬುರಗಿ : ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಲಬುರ್ಗಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ನೆಲದಿಂದಲೇ ರಣಕಹಳೆ ಮೊಳಗಿಸಲಿದ್ದಾರೆ.

ಮೋದಿ ಚುನಾವಣಾ ರ್ಯಾಲಿಗೆ ನಗರ ಸಜ್ಜಾಗಿದ್ದು, ಎಲ್ಲವೂ ಕೇಸರಿಮಯವಾಗಿದೆ. ಚುನಾವಣಾ ರ್ಯಾಲಿಗೆ ಚಾಲನೆ ನೀಡಲು ಖರ್ಗೆ ತವರು ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಂದಲೇ ಶಂಖನಾದ ಮೊಳಗಿಸುತ್ತಿರುವುದು ರಾಜಕೀಯ ವಲಯದಲ್ಲಿಎಲ್ಲಿಲ್ಲದ ಮಹತ್ವ ಪಡೆದಿದೆ.

ಇದನ್ನೂ ಓದಿ: ದಿನಭವಿಷ್ಯ: ಇಂದು ಚತುರ್ಥ ದಶಮ ಯೋಗ, ಈ ರಾಶಿಯವರಿಗೆ ಶನೈಶ್ಚರನ ಆಶೀರ್ವಾದ!

ರ್ಯಾಲಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಮೋದಿ ಆಗಮನದ ಹಿನ್ನಲೆಯಲ್ಲಿ ಕೇಸರಿಪಡೆಯಲ್ಲಿ ಉತ್ಸಾಹ ಮೇರೆ ಮೀರಿದ್ದು, ಸಂಚಲನ ಉಂಟು ಮಾಡಿದೆ.

ನಗರದ ನೂತನ ವಿದ್ಯಾಲಯ ಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಬೃಹತ್‌ ರ್ಯಾಲಿ ನಿಗದಿಯಾಗಿದ್ದು, ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಮುಖಂಡರು,ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಪಕ್ಷದ ಗಣ್ಯರು ಸಾಕ್ಷಿಯಾಗಲಿದ್ದಾರೆ.

ರಾಜ್ಯದಲ್ಲಿ ಮೋದಿಯವರ 10 ಕಾರ್ಯಕ್ರಮ :

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ 10ಕ್ಕೂ ಹೆಚ್ಚು ಸಭೆ-ಸಮಾವೇಶ ನಡೆಸುವ ಸಾಧ್ಯತೆ ಇದೆ. ಚುನಾವಣೆ ನಿರ್ವಹಣೆ ಸಮಿತಿ ಸಂಚಾಲಕ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಈ ವಿಷಯ ಪ್ರಸ್ತಾವವಾಗಿದ್ದು, ಲೋಕಸಭೆ ಚುನಾವಣೆ ನಿರ್ವಹಣೆಗಾಗಿ 41 ವಿಭಾಗಗಳಿಂದ ಕೂಡಿದ ಪ್ರತ್ಯೇಕ “ವಾರ್ ರೂಂ’ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ಶುಕ್ರವಾರ ದಿನವಿಡೀ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಕೂಡ ಆಗಮಿಸಿ ಬಂಡಾಯ ಶಮನಕ್ಕೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಚುನಾವಣೆ ನಿರ್ವಹಣೆ ಉದ್ದೇಶದಿಂದ ವಾರ್ ರೂಂನಲ್ಲಿ ಒಟ್ಟು 151 ಪ್ರಮುಖರನ್ನು ನೇಮಕ ಮಾಡಲು ನಿರ್ಧರಿಸಲಾಗಿದ್ದು, ಫಲಾನುಭವಿಗಳ ಸಭೆ, ಜಾತಿ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ.

RELATED ARTICLES

Related Articles

TRENDING ARTICLES