Friday, November 22, 2024

ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್​ನಲ್ಲಿ ಕ್ಯಾಮರಾ ಇಟ್ಟ ಕಾಮುಕ

ಕಲಬುರಗಿ : ಕಾಮುಕ ಯುವಕನೊಬ್ಬ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್​ನಲ್ಲಿ ಕ್ಯಾಮೆರಾ ಇಟ್ಟ ಘಟನೆ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಶಾಂತಾನಗರದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್​ಗೆ ಹೊಂದಿಕೊಂಡಂತಿರುವ ಮನೆಯಲ್ಲಿ ವಾಸವಾಗಿದ್ದ ಸಲೀಂ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಾತ್​ರೂಮ್​ಗೆ ಹೋದ ವಿದ್ಯಾರ್ಥಿನಿಯರು, ಕ್ಯಾಮೆರಾ ಇಟ್ಟಿರುವುದನ್ನು ಕಂಡ ಕೂಡಲೇ ಹೊರಬಂದು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯರು, ಗಲಾಟೆಯನ್ನು ಬಿಡಿಸಿ ಆರೋಪಿ ಎಸ್ಕೇಪ್ ಆಗಲು ಸಹಕರಿಸಿದ್ದರು. ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ತಹಶೀಲ್ದಾರ್ ಮತ್ತು ಜೇವರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮನೆಯವರನ್ನು ವಿಚಾರಣೆ ನಡೆಸಿದ್ದು, ಆ ಬಳಿಕ ಮನೆಯವರು ಆರೋಪಿಯನ್ನು ಕರೆಸಿದ್ದಾರೆ. ಕ್ಯಾಮೆರಾ ಇಟ್ಟ ಕಾಮುಕನನ್ನ ಜೇವರ್ಗಿ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES