ನವದೆಹಲಿ : 8.59 ಕೋಟಿ ರೂ ಹಣ ಪತ್ತೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸೆ.13ರವರೆಗೆ ಇಡಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಇಡಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಡಿಕೆಶಿ ಪರ ಹಾಗೂ ವಿರೋಧದ ವಾದ ಆಲಿಸಿದ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹರ್ ಅವರು ಇಡಿ ವಶಕ್ಕೆ ಡಿಕೆಶಿಯನ್ನು ಒಪ್ಪಿಸಿದ್ದು, ಕುಟುಂಬ ಸದಸ್ಯರು ಪ್ರತಿ ದಿನ ಭೇಟಿ ಮಾಡಲು ಅವಕಾಶ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ. ಅದಕ್ಕಾಗಿ ವಿಚಾರಣೆ ನಡೆಸಲು ಕಸ್ಟಡಿಗೆ ಒಪ್ಪಿಸಬೇಕೆಂದು ಇಡಿ ಪರ ವಕೀಲರು ಮಾಡಿದ ಮನವಿಗೆ ನ್ಯಾಯಾಧೀಶರು ಸ್ಪಂದಿಸಿ, 14 ದಿನಗಳ ವಶಕ್ಕೆ ಒಪ್ಪಿಸಿದ್ರು. ನ್ಯಾಯಾಲಯದ ತೀರ್ಪಿನ ಬಳಿಕ ಇಡಿ ಅಧಿಕಾರಿಗಳು ಡಿಕೆಶಿಯನ್ನು ಕಚೇರಿಗೆ ಕೊಂಡೊಯ್ದರು.
ಸೆ.13ರವರೆಗೆ ಡಿಕೆಶಿ ಇಡಿ ಕಸ್ಟಡಿಗೆ..!
TRENDING ARTICLES