Thursday, December 5, 2024

ಬೀದರ್​​ನಲ್ಲಿಯೂ 960 ಎಕರೆ ಜಮೀನು ವಕ್ಫ್​ಬೋರ್ಡ್ ವಶ

ಬೀದರ್​ :ಗಡಿಜಿಲ್ಲೆ ಬೀದರ್​ನಲ್ಲಿಯು ಅನ್ನದಾತರಿಗೂ ವಕ್ಪ್ ಬೋರ್ಡ್ ಬಿಸಿ ತಟ್ಟಿದ್ದು. ಸುಮಾರು 960ಕ್ಕೂ ಅಧಿಕ ಎಕರೆ ಭೂಮಿಯನ್ನು ವಕ್ಫ್​ಬೋರ್ಡ್​ ವಷಪಡಿಸಿಕೊಂಡಿದೆ ಎಂಬ ಮಾಹಿತಿ ದೊರೆತಿದೆ.

ಬೀದರ್ ಜಿಲ್ಲೆಯ ರೈತರ ಭೂಮಿ ಮೇಲೂ ವಕ್ಪ್ ವಕ್ರದೃಷ್ಟಿ ಬಿದ್ದಿದ್ದು. 960ಕ್ಕೂ ಅಧಿಕ ಎಕರೆ ಭೂಮಿಯ ಪಹಣಿಯಲ್ಲಿ ವಕ್ಪ್ ಬೋರ್ಡ್ ಎಂದು ನಮೂದಾಗಿದೆ. ಪಹಣಿಯ ಕಾಲಂ ನಂ.11ರಲ್ಲಿ ವಕ್ಪ್ ಬೋರ್ಡ್ ಹೆಸರಿದ್ದು ಇದನ್ನು ನೋಡಿದ ರೈತರು ಕಂಗಾಲಾಗಿದ್ದಾರೆ.

2013ರಲ್ಲಿ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಹೆಸರು ನಮೂದಾಗಿದ್ದು. ಬೀದರ್ ಜಿಲ್ಲೆಯ ಚಟ್ನಳ್ಳಿ ಗ್ರಾಮದ ಜಮೀನು ವಕ್ಪ್‌ಗೆ ಸೇರ್ಪಡೆಯಾಗಿದೆ. ಹಲವು ವರ್ಷಗಳಿಂದ ಉಳುಮೆ ಮಾಡ್ತಿದ್ದ ರೈತರ ಭೂಮಿಯನ್ನು ವಕ್ಪ್ ಬೋರ್ಡ್ ಕಸಿದುಕೊಳ್ಳುತ್ತಿದ್ದು.ಕೃಷಿ ಭೂಮಿ ನಂಬಿ ಬದುಕುತ್ತಿದ್ದ ರೈತರ ಬದುಕು ಅತಂತ್ರವಾಗಿದೆ.

2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ಪಿ.ಜಾಫರ್ ಮಾಡಿದ ಆದೇಶಕ್ಕೆ ರೈತರ ಬದುಕು ದುಸ್ಥರವಾಗಿದ್ದು. ಜಮೀನಿನ ಪಹಣಿಯಲ್ಲಿ ವಕ್ಪ ಬೋರ್ಡ್ ಹೆಸರು ನಮೂದು ಆಗಿರುವ ಹಿನ್ನೆಲೆ ರೈತರಿಗೆ ಬ್ಯಾಂಕ್​ನಿಂದ  ಸಾಲ, ಸಿಗುತ್ತಿಲ್ಲ ಎಂದು ರೈತರು ಕೇಳುತ್ತಿದ್ದಾರೆ. ಜೀವನಾದ್ರೂ ಬಿಡ್ತೀವೆ, ಭೂಮಿ ಬಿಟ್ಟು ಕೊಡಲ್ಲ ಅಂತಿರೋ ರೈತರು
ಪಹಣಿಯಲ್ಲಿರೋ ವಕ್ಪ್ ಬೋರ್ಡ್ ತೆಗೆದುಹಾಕುವಂತೆ  ಆಗ್ರಹಿಸಿದ್ದಾರೆ. ಒಂದು ವೇಳೆ ವಕ್ಪ್ ಬೋರ್ಡ್ ಹೆಸರು ತೆಗೆದು ಹಾಕದಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES