Sunday, December 15, 2024

ನಾಳೆ ದಾಸ ದರ್ಶನ್​ ಭವಿಷ್ಯ ನಿರ್ಧಾರ : ಹೈಕೋರ್ಟ್​ನಿಂದ ಸಿಗುತ್ತಾ ಬೇಲ್​ ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​​ ಹೈಕೋರ್ಟ್​ನಿಂದ ಜಾಮೀನಿನ ನಿರೀಕ್ಷೆಯಲ್ಲಿದ್ದು. ಇಂದು ವಾದ ಮಾಡಿದ ದರ್ಶನ್​ ಪರ ವಕೀಲ ದರ್ಶನ್​ಗೆ ಇರುವ ಬೆನ್ನು ನೋವಿನ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು, ದರ್ಶನ್​ಗೆ ಜಾಮೀನು ನೀಡಬೇಕು ಎಂದು ವಾದ ಮಾಡಿದರು.

ಮಧ್ಯಾಹ್ನ ಹೈಕೋರ್ಟ್​ನಲ್ಲಿ ವಾದ ಮಾಡಿದ ಸಿ.ವಿ ನಾಗೇಶ್​. ದರ್ಶನ್​ಗೆ ಇರುವ ಆರೋಗ್ಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಈ ಹಿಂದೆ ದರ್ಶನ್​ಗೆ ಹಿಪ್​ ಜಾಯಿಂಟ್​ ಸಮಸ್ಯೆಯಿದ್ದು ಅವರು ಅದರ ಕುರಿತು ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರ ಸ್ಪೈನಲ್​ ಕಾರ್ಡಿನಲ್ಲಿ ಸಮಸ್ಯೆಯಿದ್ದು ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿರುವದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.

ವಾದ ಪ್ರತಿವಾದ ಆಲಿಸಿರುವ ಕೋರ್ಟ್​ ನಾಳೆಗೆ ತೀರ್ಪನ್ನು ಕಾಯ್ದಿರಿಸಿದ್ದು. ಬೇಲ್​ ಸಿಗುವ ನಿರೀಕ್ಷೆಯಲ್ಲಿರುವ ದರ್ಶನ್​ಗೆ ನಾಳೆ ಅತ್ಯಂತ ಪ್ರಮುಖ ದಿನವಾಗಿದೆ.

RELATED ARTICLES

Related Articles

TRENDING ARTICLES