Sunday, December 15, 2024

ರಾಜ್ಯ ಸರ್ಕಾರದ ಮೇಲೆ ಟಿಪ್ಪು ಸುಲ್ತಾನ್​ ದೆವ್ವ ಬಂದಿದೆ, ಆರ್​.ಅಶೋಕ್​

ಬೆಂಗಳೂರು : ರಾಜ್ಯದಲ್ಲಿ ರೈತರಿಗೆ ವಕ್ಫ್​ ಬೋರ್ಡ್​ ನೀಡುತ್ತಿರುವ ನೋಟಿಸ್​ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಆಡಳಿತ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿ ಬಗ್ಗೆ ರೈತರಿಗೆ ನೋಟಿಸ್ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಆರ್​.ಅಶೋಕ್​ ರಾಜ್ಯ ಸರ್ಕಾರ ಲವ್ ಜಿಹಾದ್ ರೀತಿ ಲ್ಯಾಂಡ್ ಜಿಹಾದ್ ಮಾಡಲು ಪ್ರಯತ್ನಿಸುತ್ತಿದೆ. ರೈತರ ಆಸ್ತಿಯನ್ನ ಕಬಳಿಸಲು ವಕ್ಫ್ ಪ್ರಯತ್ನ ಮಾಡುತ್ತಿದೆ. ಪಾರ್ಲಿಮೆಂಟ್ ಕೂಡ ನಮ್ದೇ ಅಂತ ಹೇಳಿದ್ದಾರೆ, ವಿಧಾನಸೌಧ ಕೂಡ ನಮ್ದೇ ಅಂತ ಮುಸ್ಲಿಂರು ಹೇಳಿದ್ದಾರೆ, ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲಾ ಈ ರೀತಿ ಮತಾಂಧರ ಶಕ್ತಿ ನಡೆಯುತ್ತೆ. ಇವುಗಳೆಲ್ಲ ಲವ್ ಜಿಹಾದ್ ಮಾಡೋದು,ಗಲಾಟೆ ಮಾಡೋದಕ್ಕೆ,ಬಾಂಬ್ ಹಾಕೋದಕ್ಕೆ ಇದೆಲ್ಲ ಪ್ರೇರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿಯನ್ನ ಲೂಟಿ ಮಾಡಿದವರು ಕಾಂಗ್ರೆಸ್​ವರೇ, ಸಿಕ್ಕಿದ ಜಮೀನ ಎಲ್ಲ ನಮ್ದೇ ನಮ್ದೇ ಅನ್ತಾರೆ
ರೈತರ ಅನ್ನವನ್ನ ಕಿತ್ತುಕೊಳ್ಳೋಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ
ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ, ಹೀಗಾಗಿಯೇ ರಾಮೇಶ್ವರಂ ಕೆಫೆ ಯಲ್ಲಿ ಬಾಂಬ್ ಬ್ಲಾಸ್ಟ್ ಆಯ್ತು ಅದಕ್ಕೆ ಬಿಜಿನೆಸ್ ಗಲಾಟೆ ಅಂತಾ ಡಿಸಿಎಂ ಹೇಳಿದರು.ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನ ನಮ್ಮ ಬ್ರದರ್ಸ್ ಅಂತ ಉಪಮುಖ್ಖಮಂತ್ರಿಗಳು ಹೇಳ್ತಾರೆ. ಹುಬ್ಬಳ್ಳಿ ಗಲಾಟೆ  ಕೇಸ್ ವಾಪಸ್ ಪಡೆದಿದ್ದಾರೆ. ಇದೊಂದು ರೀತಿ ತುಘಲಕ್ ಸರ್ಕಾರ, ಸಿಎಂ ,ಡಿಸಿಎಂ ಮೈ ಮೇಲೆ ಟಿಪ್ಪುದೆವ್ವ ಬಂದಿದೆ, ಹುಣಸೆ, ಬೇವಿನ ಸೊಪ್ಪು ಹಿಡಿದು ದೆವ್ವ ಬಿಡಸೋ ರೀತಿ ಇವ್ರುಗೂ ಟಿಪ್ಪು ದೆವ್ವ ಬಿಡಿಸಬೇಕು ಇಲ್ಲದಿದ್ದರೆ  ವಿಧಾನಸೌಧವನ್ನೂ ವಕ್ಫ್ ಆಸ್ತಿ ಅಂತಾ ಘೋಷಿಸಿಬಿಡ್ತಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES