ನವದೆಹಲಿ: ತೀವ್ರ ಅನಾರೋಗ್ಯದಿಂದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದ್ರು. ನಾಳೆ ಅವರ ಅಂತಿಮ ಕಾರ್ಯ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಬಗ್ಗೆ ಅನುಮಾನವಿದೆ.
ಪ್ರಧಾನಿ ನರೇಂದ್ರ ಮೋದಿಯವರು 3 ದಿನಗಳ ವಿದೇಶ ಪ್ರವಾಸದಲ್ಲಿದ್ದು, ಅರುಣ್ ಜೇಟ್ಲಿಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಂತಾಪವನ್ನು ಸೂಚಿಸಿ ಟ್ವೀಟ್ ಮಾಡಿದ್ರು. ಅಷ್ಟೇ ಅಲ್ಲದೇ, ಜೇಟ್ಲಿಯವರ ಪತ್ನಿ, ಮಗನಿಗೆ ಕರೆ ಮಾಡಿ ಸಾಂತ್ವನವನ್ನು ಹೇಳಿದ್ರು. ಈ ವೇಳೆ ಅರುಣ್ ಜೇಟ್ಲಿಯವರ ಮಗ ಮೋದಿಯವರಿಗೆ ವಿದೇಶ ಪ್ರವಾಸವನ್ನು ಮೊಟಕುಗೊಳಿಸದಂತೆ ಮನವಿ ಮಾಡಿದ್ರು. ಭಾನುವಾರ ಪ್ರಾನ್ಸ್ನಲ್ಲಿ ನಡೆಯುವ ಜಿ.20 ಶೃಂಗ ಸಭೆಯಲ್ಲಿ ಮೋದಿ ಭಾಗವಹಿಸಬೇಕಾಗಿದ್ದು, ಸೋಮಾವಾರ ಅವರು ಭಾರತಕ್ಕೆ ವಾಪಾಸಾಗಲಿದ್ದರೆ. ಹೀಗಾಗಿ ಭಾನುವಾರ ಮಧ್ಯಾಹ್ನ ನಂತರ ನಡೆಯುವ ಅರುಣ್ ಜೇಟ್ಲಿಯವರ ಅಂತ್ಯ ಸಂಸ್ಕಾರದಲ್ಲಿ ನರೇಂದ್ರ ಮೋದಿಯವರು ಪಾಲ್ಗೊಳ್ಳುವ ಸಾಧ್ಯತೆ ತೀರಾ ವಿರಳ ಎನ್ನಲಾಗಿದೆ.