ಭಾರತ ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದು ಮಾಡಿರೋದನ್ನು ವಿರೋಧಿಸಿ ಪಾಕಿಸ್ತಾನ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆ ನಿರಾಕರಿಸಿದೆ. ಹೀಗಾಗಿ ಭಾರತದ ವಿರುದ್ಧ ಪಾಕ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ.
ಹೌದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸಿದ್ದ ಕಲಂ 370ನ್ನು ರದ್ದು ಮಾಡಿರುವುದು ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಆಘಾತ ನೀಡಿದೆ. ಭಾರತ ಸರ್ಕಾರದ ಈ ನಿರ್ಧಾರದಿಂದಾಗಿ ಮುಂದೆ ಪಿಒಕೆಯನ್ನು ಕಳೆದುಕೊಳ್ಳಬಹುದೆಂಬ ಭೀತಿ ಪಾಕಿಸ್ತಾನಕ್ಕೆ ಎದುರಾಗಿದೆ. ಇನ್ಮುಂದೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿರುವುದರಿಂದ ಸಹಜವಾಗಿಯೇ ಪಾಕಿಸ್ತಾನ ತತ್ತರಿಸಿದೆ. ಹೀಗಾಗಿ ಆರ್ಟಿಕಲ್ 370 ರದ್ದು ಮಾಡಿರೋದನ್ನು ವಿರೋಧಿಸಿ ವಿಶ್ವಸಂಸ್ಥೆಗೆ ಪಾಕ್ ಪತ್ರ ಬರೆದಿತ್ತು. ಪತ್ರದಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.
ಆದ್ರೆ ಈ ಪತ್ರದ ಬಗ್ಗೆ ಯಾವೂದೇ ಪ್ರತಿಕ್ರಿಯೆಯನ್ನು ನೀಡೋದಿಲ್ಲ ಅಂತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹೇಳಿದ್ದಾರೆ. ಹೀಗಾಗಿ ಜಾಗತಿಕವಾಗಿ ಭಾರತದ ಕ್ರಮವನ್ನು ಟೀಕಿಸಿದ ಪಾಕ್ಗೆ ತೀವ್ರ ಹಿನ್ನೆಡೆಯಾಗಿದೆ.