ಲೆಕ್ಕವಿಲ್ಲದಷ್ಟು ಲವ್ ಸ್ಟೋರಿಗಳನ್ನು, ಮ್ಯಾರೇಜ್ ಸ್ಟೋರಿಗಳನ್ನು ಕೇಳಿರ್ತೀರಿ. ಬಹುಶಃ ಇಂಥಾ ಒಂದು ಮ್ಯಾರೇಜ್ ಸ್ಟೋರಿಯನ್ನು ನೀವು ಎಲ್ಲೂ ಕೇಳಿರಲ್ಲ..! ಇದು ಕಂಡು ಕೇಳರಿಯದ ವಿಚಿತ್ರ ಮ್ಯಾರೇಜ್ ಸ್ಟೋರಿ..!
ಇಂಥಾದ್ದೊಂದು ಮದುವೆ ನಡೆದಿರೋದು ಇಂಗ್ಲೆಂಡ್ನಲ್ಲಿ. ಆಕೆಯ ಹೆಸ್ರು ಎಲಿಜಬೆತ್ ಹೋಡ್ ಅಂತ. ಒಂದಲ್ಲ, ಎರಡಲ್ಲ ನಾಲ್ಕು ಎಂಗೇಜ್ಮೆಂಟ್ಗಳು ಮುರಿದುಬಿದ್ದಿದ್ದರಿಂದ ಆಕೆ ಸಿಕ್ಕಾಪಟ್ಟೆ ನೊಂದು ಬಿಟ್ಟಿದ್ದಾರೆ..! ಎಲ್ಲಾ ನಿಶ್ಚಿತಾರ್ಥಗಳು ಬ್ರೇಕ್ಅಪ್ ಆಗಿದ್ದರಿಂದ ಯಾವ ಪುರುಷರ ಸಂಬಂಧವೇ ಬೇಡ ಅಂತ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ..! ಪುರುಷರನ್ನೇ ಯಾಕೆ ಮದ್ವೆಯಾಗ್ಬೇಕು..? ನಾನಿನ್ನೂ ಪುರುಷರ ಜೊತೆ ಎಂಗೇಜ್ ಆಗಲ್ಲ ಅಂತ ನಿರ್ಧರಿಸಿದ ಆಕೆ ತಾನು ಸಾಕಿದ ನಾಯಿಯನ್ನೇ ಮದ್ವೆಯಾಗಿದ್ದಾರೆ..!
ಹೌದು, ನಾಲ್ಕು ಎಂಗೇಜ್ಮೆಂಟ್ಗಳು ಮುರಿದುಬಿದ್ದಿರುವುದರಿಂದ ಪುರುಷರೊಂದಿಗಿನ ಸಂಬಂಧವೇ ಬೇಡ ಅಂತ ಬೇಸತ್ತು ಎಲಿಜಬೆತ್ ಹೋಡ್ ತನ್ನ ಸಾಕು ನಾಯಿ ಲೋಗನ್ನನ್ನು ವಿವಾಹವಾಗಿದ್ದಾರೆ..! ಐಟಿವಿಯ ‘ದಿಸ್ ಮಾರ್ನಿಂಗ್’ ಅನ್ನೋ ಶೋನಲ್ಲಿ 49 ವರ್ಷದ ಎಲಿಜಬೆತ್ ಹೋಡ್ ತನ್ನ ಮುದ್ದಿನ ನಾಯಿ ಲೋಗನ್ನನ್ನು ವರಿಸಿದ್ದಾರೆ. ಸದ್ಯ ಎಲ್ಲಾ ಕಡೆ ಇವರ ಮದ್ವೆಯದ್ದೇ ಮಾತು.. ಈ ವಿಚಿತ್ರ ಮ್ಯಾರೇಜ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಜೊತೆಗೆ ಬಹಳಷ್ಟು ಟ್ರೋಲ್ಗಳು ಕೂಡ ಆಗುತ್ತಿವೆ.
ಇಂಥಾ ವಿಚಿತ್ರ ಮ್ಯಾರೇಜ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ, ನೋಡಿಲ್ಲ..!
TRENDING ARTICLES