Monday, May 5, 2025

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರ ನದಿಯಲ್ಲಿ ಬಿದ್ದು ಸಾ*ವು

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ 23 ವರ್ಷದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಬಿದ್ದು ಸಾವನ್ನಪ್ಪಿದ್ದು. ಈತ ಲಷ್ಕರ್​ ಭಯೋತ್ಫಾದಕರಿಗೆ ನೆರವು ನೀಡಿದ್ದನು ಎಂದು ತಿಳಿದು ಬಂದಿದೆ. ಮೃತ ಯುವಕನನ್ನು ಇಮ್ತಿಯಾಜ್​ ಅಹ್ಮದ್​ ಎಂದು ಗುರುತಿಸಲಾಗಿದೆ.

ಲಷ್ಕರ್-ಎ-ತೈಬಾ ಸ್ಲೀಪರ್ ಸೆಲ್ ಸದಸ್ಯನೆಂದು ಶಂಕಿಸಿ ಪೊಲೀಸರು ಇಮ್ತಿಯಾಜ್ ಅಹ್ಮದ್​ನನ್ನು ಬಂಧಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ಉಗ್ರರು ಅಡಗಿಕೊಂಡಿದ್ದ ಸ್ಥಳಕ್ಕೆ ಕರೆದೊಯ್ದರು. ಆದರೆ ಈ ವೇಳೆ ಆತನ ಪೊಲೀಸರಿಂದ ತಪ್ಪಿಸಿಕೊಂಡು ವೈಶೋ ನದಿಗೆ ಹಾರಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಈಜಲು ಸಾಧ್ಯವಾಗದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಮನೆ-ಮನೆಗೆ ಹೋಗಿ ದತ್ತಾಂಶ ಸಂಗ್ರಹ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ಸಿಎಂ ದಿಟ್ಟ ನಿರ್ಧಾರ

ಇನ್ನು ಇಮ್ತಿಯಾಜ್ ನದಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿರುವ ಡ್ರೋನ್​ ದೃಷ್ಯಾವಳಿಗಳನ್ನು ಪೊಲೀಸರು ಬಿಡಿಗಡೆ ಮಾಡಿದ್ದು. ಈ ವಿಡಿಯೋದಲ್ಲಿ ಇಮ್ತಿಯಾಜ್​ ನದಿಯಲ್ಲಿ ಕೊಚ್ಚಿ ಹೋಗಿರುವುದು ಕಂಡುಬಂದಿದೆ.

ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪ..!

ಇಮ್ತಿಯಾಜ್​ ಕುಟುಂಬಸ್ಥರು ಪೊಲೀಸರ ಮೇಲೆ ಹತ್ಯೆಯ ಆರೋಪ ಹೊರಿಸಿದ್ದು. ಪೊಲೀಸರ ಕಸ್ಟಡಿಯಲ್ಲಿ ಈ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಕುಲ್ಗಾಮ್‌ನಿಂದ ಕಾಣೆಯಾದ ಮೂವರು ಗುಜ್ಜರ್ ಯುವಕರ ಶವಗಳನ್ನು ವೈಶೋ ಹೊಳೆಯಿಂದ ವಶಪಡಿಸಿಕೊಂಡ ಹಿಂದಿನ ಪ್ರಕರಣಕ್ಕೆ ಹೋಲಿಕೆಯಾಗಿದೆ ಇದು ಉದ್ದೇಶ ಪೂರ್ವಕ ಹತ್ಯೆಯೆಂಬಂತೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಮತಾಂಧತೆ ಹೆಚ್ಚಾಗುತ್ತೆ, ಮಹಾನ್​ ನಾಯಕನಿಗೆ ಮೃತ್ಯು ಬರಲಿದೆ: ಕೋಡಿ ಶ್ರೀ ಭವಿಷ್ಯ

ಮೆಹಬೂಬ್​ ಮುಫ್ತಿ ಈ ಘಟನೆ ಘಟನೆ ಕುರಿತು ಹೇಳಿಕೆ ನೀಡಿದ್ದು. ‘ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದೇ ಹಿಂಸಚಾರವು, ಇಡೀ ವ್ಯವಸ್ಥೆಯನ್ನು ಅಲುಗಾಡಿಸಿದ್ದರೆ, ಅಪರಾಧಿಗಳು ಈಗಾಗಲೇ ತಮ್ಮ ಗುರಿಯನ್ನು ಸಾಧಿಸಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES