Monday, December 23, 2024

ಬೇಲೇಕೇರಿ ಅದಿರು ನಾಪತ್ತೆ ಕೇಸ್​ : ಶಾಸಕ ಸೈಲ್​ಗೆ 7ವರ್ಷ ಜೈಲು 44 ಕೋಟಿ ದಂಡ

ಉತ್ತರ ಕನ್ನಡ : ಉತ್ತರ ಕನ್ನಡದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಯೆಂದು ತೀರ್ಪು ನೀಡಿದ್ದ ನ್ಯಾಯಾಲಯ ಇಂದು ಶಿಕ್ಷೆಯನ್ನು ವಿವರಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಸತೀಶ ಸೈಲ್ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು. ಒಟ್ಟು 6 ಪ್ರಕರಣಗಳಿಗೆ ಶಿಕ್ಷೆ ವಿಧಿಸಿದೆ.

ಉತ್ತರ ಕನ್ನಡದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್​ ಸೈಲ್​ಗೆ 44 ಕೋಟಿಗೂ ಹೆಚ್ಚು ದಂಡ ವಿಧಿಸಿದೆ. ದಂಡದ ವಿವರಗಳು ಕೆಳಗಿನಂತಿದೆ.

ಮೊದಲ ಕೇಸ್​ನಲ್ಲಿ 6 ಕೋಟಿ ರೂ. ದಂಡ
ಎರಡನೇ ಕೇಸ್​ನಲ್ಲಿ 9.60 ಕೋಟಿ ರೂ. ದಂಡ
ಮೂರನೇ ಕೇಸ್​ನಲ್ಲಿ 9.36 ಕೋಟಿ ರೂ. ದಂಡ
ನಾಲ್ಕನೇ ಕೇಸ್​ನಲ್ಲಿ 9.54 ಕೋಟಿ ರೂ. ದಂಡ
ಐದನೇ ಕೇಸ್​ನಲ್ಲಿ 9.25 ಕೋಟಿ ರೂ. ದಂಡ
ಆರನೇ ಕೇಸ್​ನಲ್ಲಿ 9 ಲಕ್ಷ ರೂ. ದಂಡ ವಿಧಿಸಿದ್ದು
ಒಟ್ಟು 44 ಕೋಟಿಗೂ ಹೆಚ್ಚು ದಂಡ ವಿಧಿಸಿ ಕೋರ್ಟ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES