Wednesday, September 18, 2024

ಅಕ್ಕಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ; ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದು

ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದತಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬಾಸುಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ರಫ್ತು ದರವನ್ನು (ಎಂಇಪಿ) ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.

ಗಮನಿಸಿ: ಸೋನಂ ಕಪೂರ್​ಗೆ ₹231 ಕೋಟಿ ಬೆಲೆಯ ಅಪಾರ್ಟ್​​ಮೆಂಟ್ ಗಿಫ್ಟ್​​​​

ರೈತರ ಕಲ್ಯಾಣದತ್ತ ಗಮನಹರಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಾಸುಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ದರವನ್ನು ರದ್ದುಗೊಳಿಸಲು ನಿರ್ಧರಿಸಿದೆ. ರಫ್ತು ದರವನ್ನು ರದ್ದುಪಡಿಸುವುದರಿಂದ ಬಾಸುಮತಿ ಅಕ್ಕಿ ಉತ್ಪಾದಿಸುವ ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಅನುಕೂಲವಾಗುತ್ತದೆ. ಬಾಸುಮತಿ ಅಕ್ಕಿಯ ಬೇಡಿಕೆ ಹೆಚ್ಚಳದೊಂದಿಗೆ ರಫ್ತು ಕೂಡ ಹೆಚ್ಚಾಗುತ್ತದೆ ಎಂದು ಚೌಹಾಣ್​ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿ ಟನ್‌ಗೆ 79,678 ರೂ ದರ ನಿಗದಿಪಡಿಸಲಾಗಿತ್ತು. ಇಡೀ ದೇಶದಲ್ಲಿಯೇ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬಾಸುಮತಿ ಅಕ್ಕಿ ಬೆಳೆಯಲಾಗುತ್ತದೆ.

RELATED ARTICLES

Related Articles

TRENDING ARTICLES