Thursday, September 19, 2024

ತುಂಗಭದ್ರಾ ಜಲಾಯಶಯದ ಗೇಟ್ ಚೈನ್​ ಲಿಂಕ್ ಕಟ್​​: ಅಪಾರ ಪ್ರಮಾಣದ ನೀರು ಹೊರಗೆ

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್​ ಲಿಂಕ್ ಕಟ್​ ಆಗಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ನೀರಿನ ಹರಿವಿರುವುದರಿಂದ ಗೇಟ್​ ದುರಸ್ತಿ ಮಾಡಲು ಸಾಧ್ಯವಾಗ್ತಿಲ್ಲ. ಗೇಟ್​ ದುರಸ್ತಿ ಮಾಡಬೇಕೆಂದ್ರೆ 105 ಟಿಎಂಸಿಯಲ್ಲಿ 55 ರಿಂದ 65 ಟಿಎಂಸಿವರೆಗೂ ನೀರು ಖಾಲಿ ಮಾಡಬೇಕಾಗಿದೆ.

ಸದ್ಯ ಗೇಟ್​ನ ಚೈನ್​ ಲಿಂಕ್​ ಕಟ್​ ಆಗಿರುವ ಹಿನ್ನೆಲೆ ರಾತ್ರಿಯಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಎಲ್ಲಾ ಗೇಟ್​ಗಳಿಂದ ನೀರು ಹೊರ ಬಿಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ಸಾವಿರಾರು ಕೋಟಿ ಹಗರಣಗಳ ತನಿಖೆಗೆ ಸಿದ್ದತೆ: ‘ದೋಸ್ತಿ’ಗೆ ಉರುಳಾಗುತ್ತಾ ಹಗರಣಗಳ ತನಿಖೆ..?

ಇತ್ತ ಗೇಟ್​ ಚೈನ್​​ ಲಿಂಕ್​ ಕಟ್​ ಆದ ಹಿನ್ನೆಲೆ ತುಂಗಭದ್ರಾ ಜಲಾಶಯದ ವೈಕುಂಠ ಅಥಿತಿ ಗೃಹದಲ್ಲಿ ಅಧಿಕಾರಿಗಳು ಹೈವೋಲ್ಟೇಜ್ ಮೀಟಿಂಗ್ ಮಾಡಿದ್ದಾರೆ. ಟಿಬಿ ಬೋರ್ಡ್ ಕಾರ್ಯದರ್ಶಿ ಓಆರ್​ಕೆ ರೆಡ್ಡಿ, ಎಂಡಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಟಿಬಿ ಟ್ಯಾಂ ಅಧಿಕಾರಿಗಳು ಹೈದ್ರಾಬಾದ್​ಗೆ ಮಾಹಿತಿ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES