ಬೆಂಗಳೂರು: ಕೇಂದ್ರ ಸಚಿವ H.D.ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ನಡೆದ ಜಂತಕಲ್ ಮೈನಿಂಗ್ ಕೇಸ್ ತನಿಖೆ ಚುರುಕುಗೊಳಿಸಲಾಗಿದೆ. ಈ ಮೂಲಕ ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಲು ಸಿಎಂ, ಡಿಸಿಎಂ ರಣತಂತ್ರ ಹೆಣೆದಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಹಾಗು ಜಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಯಾವ ಯಾವ ಸಚಿವರು ಅಕ್ರಮ ಕಾಮಗಾರಿ, ಅವ್ಯವಹಾರ, ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಇವೆಲ್ಲವುಗಳ ತನಿಖೆಗೆ ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ: 420 ಕುಮಾರ ಎಗರಿ ಬೀಳುತ್ತಿದ್ದಾರೆ: ಕಾಂಗ್ರೆಸ್
ಸದ್ಯ ಯಾವ್ಯಾವ ಹಗರಣಗಳ ತನಿಖೆ ಮುಗಿದಿದೆ ಎಂಬುದನ್ನು ನೋಡೋದಾದ್ರೆ, ಕಿಯೋನಿಕ್ಸ್ ಹಗರಣದ ತನಿಖೆ
ಅಂತಿಮ ಹಂತಕ್ಕೆ ತಲುಪಿವೆ. ಈ ಕೇಸ್ನಲ್ಲಿ 500 ಕೋಟಿ ಅಕ್ರಮ ನಡೆದಿದೆ ಎನ್ನಲಾಗಿದೆ. ಮಾಜಿ ಸಿಎಂ B.S.ಯಡಿಯೂರಪ್ಪ, ಶಾಸಕ ಅಶ್ವತ್ಥ್ ನಾರಾಯಣ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಇನ್ನು ಮಾಜಿ ಆರೋಗ್ಯ ಸಚಿವ ಸುಧಾಕರ್ ಹಾಗೂ ಶ್ರೀರಾಮುಲು ವಿರುದ್ಧ ಕೇಳಿ ಬಂದಿರುವ ಕೊವಿಡ್ ಹಗರಣದ ತನಿಖೆ ನಡೆಯುತ್ತಿದೆ. ಇಲ್ಲಿ ಸುಮಾರು 500 ಕೋಟಿ ಅಕ್ರಮ ನಡೆದಿದೆ ಎನ್ನಲಾಗಿದೆ.
ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧದ ಗಂಗಾ ಕಲ್ಯಾಣ ಯೋಜನೆ ಹಗರಣದ ತನಿಖೆಯೂ ನಡೆಯುತ್ತಿದೆ. ಇದರಲ್ಲಿ 430 ಕೋಟಿ ಅಕ್ರಮ ನಡೆದಿದೆ ಎನ್ನಲಾಗಿದೆ. ಇನ್ನು ಆರ್.ಅಶೋಕ್ ವಿರುದ್ಧದ ಭೂ ಅಕ್ರಮದ ಆರೋಪ, ಶಶಿಕಲಾ ಜೊಲ್ಲೆ ವಿರುದ್ಧದ ಮೊಟ್ಟೆ ಹಗರಣ, ಶಾಸಕ ಸುನೀಲ್ ಕುಮಾರ್ ವಿರುದ್ಧದ ಪರಶುರಾಮ ಥೀಂ ಪಾರ್ಕ್ ಹಗರಣ, ಬಿಎಸ್ವೈ, ಬೊಮ್ಮಾಯಿ ವಿರುದ್ಧದ ಬಿಟ್ ಕಾಯಿನ್ ಹಗರಣದ ತನಿಖೆ
ಅಂತಿಮ ಹಂತ ತಲುಪಿದೆ.