Monday, May 6, 2024

ಅಗ್ನಿ ಅವಘಡ: 40 ಬೈಕ್​, BMW ಕಾರು ಭಸ್ಮ

ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಮೊದಲು ಟಿಂಬರ್​ ಯಾರ್ಡ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಬಳಿಕ ಲೋವಬಲ್​ ಸ್ಪೋರ್ಟ್​​ ಹೆಸರಿನ ಗಾರ್ಮೆಂಟ್ಸ್​​​​​​​ ಕಟ್ಟಡ, ಕಾರ್‌ ವಾಶ್​​ ಕೇಂದ್ರಕ್ಕೂ ಹಬ್ಬಿದೆ. ಗಾರ್ಮೆಂಟ್ಸ್​​​​​ ಫ್ಯಾಕ್ಟರಿಗೆ ಬೆಂಕಿ ತಗುಲಿದ ಪರಿಣಾಮ 5 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆ ನಾಶವಾಗಿದೆ.

ಇದನ್ನೂ ಓದಿ: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಸಂಪನ್ನ

ಕಾರ್‌ ವಾಶ್ ಕೇಂದ್ರದಲ್ಲಿದ್ದ 40ಕ್ಕೂ ಹೆಚ್ಚು ಬೈಕ್​, BMW ಕಾರು ಭಸ್ಮವಾಗಿದೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

RELATED ARTICLES

Related Articles

TRENDING ARTICLES