Monday, May 6, 2024

ವಿದ್ಯಾರ್ಥಿಗಳ ಮೇಲೆ ಹಲ್ಲೆ; ಏಳು ಮಂದಿ ಅರೆಸ್ಟ್​​​

ಬೆಂಗಳೂರು : ಬಾಡಿಗೆ ಮನೆ ನೋಡಲು ಹೋದವರನ್ನ ಮನೆಯೊಳಗೆ ಕೂಡಿಹಾಕಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಬ್ಬಿಣದ ರಾಡ್​​​ನಿಂದ ಹಲ್ಲೆ ಮಾಡಿ ಸಿಗರೇಟ್​​​ನಿಂದ ಆರೋಪಿಗಳು ಸುಟ್ಟಿದ್ದಾರೆ. ರಾಜಾನುಕುಂಟೆ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದೆ.

ಕೃಷ್ಣ ಬಾಜಪೇಯಿ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೇ ಬೆತ್ತಲೆ ಮಾಡಿ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿದ್ಧಾರೆ. ಹಲ್ಲೆ ಮಾಡಿದ್ದಲ್ಲದೇ ಐವತ್ತು ಸಾವಿರಕ್ಕೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಗ್ನಿ ಅವಘಡ: 40 ಬೈಕ್​, BMW ಕಾರು ಭಸ್ಮ

ಅನ್ಲೈನ್ ವೆಬ್ ಸೈಟ್ ಮೂಲಕ ಮನೆ ಹುಡುಕಲು ವಿದ್ಯಾರ್ಥಿಗಳು ಬಂದಿದ್ದರು. ಈ ವೇಳೆ ಕಿಡ್ನಾಪ್ ಮಾಡಿ  ಮನೆಯೊಂದರಲ್ಲಿ ಸುಮಾರು ಐದು ಗಂಟೆಗಳ ಕಾಲ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ. ಹದಿನೈದು ದಿನಗಳ ಹಿಂದೆ ಕಾಲೇಜಿನಲ್ಲಿ ಗಲಾಟೆಯಾಗಿತ್ತು. ಇದೇ ಕೋಪಕ್ಕೆ ಈ ಘಟನೆ ನಡೆದಿದೆ. ಬಾಡಿಗೆ ಮನೆಯೊಳಗೆ ಹೋಗುತ್ತಿದ್ದಂತೆ ಕೈಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ಸದ್ಯ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ  ಏಳು ಮಂದಿಯನ್ನು ಬಂಧಿಸಿದ್ಧಾರೆ.

RELATED ARTICLES

Related Articles

TRENDING ARTICLES