Friday, May 3, 2024

ನನ್ನ ಮಗನಿಗೆ ನೇಹಾಳೇ ಪ್ರಪೋಸ್ ಮಾಡಿದ್ದಳು, ಇಬ್ಬರೂ ಮದುವೆ ಆಗ್ಬೇಕು ಅನ್ಕೊಂಡಿದ್ರು : ಫಯಾಜ್ ತಾಯಿ ಮುಮ್ತಾಜ್

ಧಾರವಾಡ : ನನ್ನ ಮಗ ಫಯಾಜ್​ಗೆ ಮೃತ ನೇಹಾಳೇ ಪ್ರಪೋಸ್​ ಮಾಡಿದ್ದಳು. ಅವರಿಬ್ಬರೂ ಮದುವೆ ಆಗಬೇಕು ಅಂದುಕೊಂಡಿದ್ರು ಎಂದು ಆರೋಪಿ ಫಯಾಜ್ ತಾಯಿ ಮುಮ್ತಾಜ್ ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮಗ ಬಾಡಿ ಬಿಲ್ಡರ್ ಇದ್ದ. ಯೂನಿವರ್ಸಿಟಿ Blue Belt ಆಗಿದ್ದ. ಅಂತವನು ಹೀಗೆ ಮಾಡಿದ್ದು ತುಂಬಾ ದುಃಖ ಆಗಿದೆ ಎಂದು ತಿಳಿಸಿದ್ದಾರೆ.

ನನ್ನ ಮಗ ಫಯಾಜ್​ಗೆ ಏನು ಶಿಕ್ಷೆ ಆಗುತ್ತದೆಯೋ ಆಗಲಿ. ಯೂನಿವರ್ಸಿಟಿ Blue Belt ಆಗಿದ್ದಾಗ ಅನೇಕ ಹುಡುಗಿಯರು ಹಿಂದೆ ಬಿದ್ದಿದ್ದರು. ಇದನ್ನು ಫಯಾಜ್ ನನಗೆ ಹೇಳಿದ್ದನು. ನೇಹಾ ಪ್ರೀತಿ ಮಾಡಿದ್ದು ಗೊತ್ತಿತ್ತು ಎಂದು ಹೇಳಿದ್ದಾರೆ.

ನಾನು ಫಯಾಜ್​ಗೆ ಬುದ್ಧಿ ಮಾತು ಹೇಳಿದ್ದೆ. ಚೆನ್ನಾಗಿ ಓದು ಅಂತ ಹೇಳಿದ್ದೇನು. ಆದರೂ, ಅವನು ಒಂದೂವರೆ ವರ್ಷದಿಂದ ಕಾಲೇಜ್‌ಗೂ ಹೋಗುತ್ತಿರಲಿಲ್ಲ. ಬಿಸಿಎ ಫೈನಲ್ ಇಯರ್ ಪರೀಕ್ಷೆ ಸಹ ಬರೆದಿರಲಿಲ್ಲ. ಪರೀಕ್ಷಾ ಶುಲ್ಕವನ್ನೂ ತುಂಬಿದ್ದೆವು. ಆದರೂ, ಪರೀಕ್ಷೆ ಬರೆದಿರಲಿಲ್ಲ ಎಂದು ತಿಳಿಸಿದ್ದಾರೆ.

ಸಣ್ಣ ಇರುವೆ ಕೊಲ್ಲುವುದಕ್ಕೂ ಹೆದರುತ್ತಿದ್ದ

ಇತ್ತೀಚೆಗೆ ಆತನ ಸಹೋದರಿ ಬರ್ತ್​ಡೇ ಇತ್ತು. ಬರ್ತ್​ಡೇ ಮುಗಿಸಿ ಹುಬ್ಬಳ್ಳಿಗೆ ಹೋಗಿದ್ದ. ಆತ ಸಣ್ಣ ಇರುವೆ ಸಹ ಕೊಲ್ಲುವುದಕ್ಕೂ ಹೆದರುತ್ತಿದ್ದ. ಅಂತವನು ಈ ಕೃತ್ಯ ಮಾಡಿದ್ದಾನೆ ಅಂದರೆ ನಂಬಲು ಆಗ್ತಿಲ್ಲ. ಪಾಪ ನೇಹಾ ಹಿರೇಮಠ ಅದೆಷ್ಟು ನೋವು ಅನುಭವಿಸಿದ್ದಳೋ ಎಂದು ಫಜಾಯ್ ತಾಯಿ ಮುಮ್ತಾಜ್ ಕಣ್ಣೀರಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES