Tuesday, April 30, 2024

ಸಿಎಂ ಆಗಿದ್ದಾಗಲೇ ಏನು ಮಾಡಿಲ್ಲ, ಇವಾಗ ಮಾಡ್ತಾರಾ? : ಚಲುವರಾಯಸ್ವಾಮಿ

ಮಂಡ್ಯ : ಮೇಕೆದಾಟು ಯೋಜನೆ ಶಂಕುಸ್ಥಾಪನೆ ಕುರಿತು ಹೇಳಿಕೆ ನೀಡಿದ್ದ ಹೆಚ್.ಡಿ. ಕುಮಾರಸ್ವಾಮಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಆಗಿದ್ದಾಗಲೇ ಏನು ಮಾಡಿಲ್ಲ. ಇವಾಗ ಮಾಡ್ತಾರಾ? ಎಂದು ಕುಟುಕಿದ್ದಾರೆ.

ಹಲವು ನಾಯಕರು ನಿರಂತರವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಮಂಡ್ಯ ಅಸ್ತಿತ್ವ ಉಳಿಯಬೇಕು ಹಾಗೂ ಅಭಿವೃದ್ಧಿ ಆಗಬೇಕು. ಮಂಡ್ಯದವರೇ ಲೋಕಸಭಾ ಸದಸ್ಯರಾಗಬೇಕು ಎನ್ನುವುದು ಎಲ್ಲರ ಅಭಿಪ್ರಾಯ ಎಂದು ಕುಮಾರಸ್ವಾಮಿ ಹೆಸರೇಳದೆ ಟೀಕಿಸಿದ್ದಾರೆ.

ಕೆರಗೋಡು ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ ನೀಡಿದ ಬಗ್ಗೆ ಮಾತನಾಡಿ, ಚುನಾವಣೆಗಾಗಿ ಏನು ಬೇಕು ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಮ್ಮ ಶಾಸಕ ಗಣಿಗ ರವಿಕುಮಾರ್ ಗದೆ ಕೊಟ್ಟು ಆಂಜನೇಯನ ಆಶೀರ್ವಾದ ಪಡೆದಿದ್ದಾರೆ. ಚುನಾವಣೆ ಅಭ್ಯರ್ಥಿಯಾಗಿ ಹೋಗಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

ಶಾಂತಿ ಕದಡೋಕೆ ಇವರ ಕೈನಲ್ಲಿ ಆಗಲ್ಲ

ಶಾಂತಿ ಇದ್ರೆ ಅವರಿಗೆ ನೆಮ್ಮದಿ ಆಗಲ್ಲ, ಅವರು ಕೆಣಕೋಕೆ ಪ್ರಯತ್ನ ಮಾಡ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಶಾಂತಿ ಕದಡೋಕೆ ಇವರ ಕೈನಲ್ಲಿ ಆಗಲ್ಲ. ಸಾರ್ವಜನಿಕರ ಮೇಲೆ ನಮಗೆ ಸಿಟ್ಟಿಲ್ಲ. ಅನಿವಾರ್ಯದಿಂದ ಯಾರು ಹೋಗಿಲ್ಲ. ಆ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಯಾರು ಇನ್ವಾಲ್ ಆಗಿದ್ದರು ಅವರ ಮೇಲೆ ಬೇಸರ ಇಲ್ಲ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES