Monday, May 6, 2024

ಪತ್ನಿ ನಿಧನದ ದಿನವೇ ಇಹಲೋಕ ತ್ಯಜಿಸಿದ ದ್ವಾರಕೀಶ್

ಬೆಂಗಳೂರು : ನಟ ದ್ವಾರಕೀಶ್ ಅವರು ಕಾಕತಾಳೀಯ ಎಂಬಂತೆ ಪತ್ನಿ ಅಂಬುಜಾ ನಿಧನದ ದಿನದಂದೇ ತಾವೂ ಇಹಲೋಕ ತ್ಯಜಿಸಿದ್ದಾರೆ.

ದ್ವಾರಕೀಶ್ ಪತ್ನಿ ಅಂಬುಜಾ ಅವರು ಏಪ್ರಿಲ್ 16, 2021ರಂದು (ಇದೇ ದಿನ) ಸಾವನ್ನಪ್ಪಿದ್ದರು. ಇದೀಗ ದ್ವಾರಕೀಶ್ ಅವರು ಕೂಡ ಇದೇ ದಿನ (ಏಪ್ರಿಲ್ 16, 2024) ಕೊನೆಯುಸಿರೆಳೆದಿದ್ದಾರೆ.

ಪತ್ನಿ ಅಂಬುಜಾ ಅವರು ಬೆಳಗ್ಗೆ 9.45ಕ್ಕೆ ಇಹಲೋಕ ತ್ಯಜಿಸಿದ್ದರು. ದ್ವಾರಕೀಶ್​ ಅವರು ಸಹ ಅದೇ ಹೊತ್ತಿನಲ್ಲಿ ನಿಧನರಾಗಿದ್ದಾರೆ ಎಂದು ದ್ವಾರಕೀಶ್​ ಅವರ ಪುತ್ರ ಯೋಗೀಶ್​ ಹೇಳಿದ್ದಾರೆ.

ಹಿರಿಯ ನಟ ಶ್ರೀನಾಥ್​ ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾತನಾಡಿ, 3 ವರ್ಷದ ಕೆಳಗೆ ದ್ವಾರಕೀಶ್ ಪತ್ನಿ ಅಂಬುಜಮ್ಮ ಅವರು ಇದೇ ದಿನ ಪ್ರಾಣ ಬಿಟ್ರು. ದ್ವಾರಕೀಶ್ ಇದೇ ದಿನ ನಮ್ಮನ್ನು ಅಗಲಿದ್ದಾನೆ ಎಂದಿದ್ದಾರೆ. ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು. ಬದುಕನ್ನು ಧೈರ್ಯವಾಗಿ ನಡೆಸೋದನ್ನ ಹೇಳಿಕೊಟ್ಟ. ಅವನ ಮಾತುಗಳನ್ನು ಈಗಿನ ಹುಡುಗರು ಅಳವಡಿಸಿಕೊಂಡು ಅವನ ಹಾಗೇ ಬೆಳೆಯಲಿ ಎಂದು ತಿಳಿಸಿದ್ದಾರೆ.

ನಟ ದ್ವಾರಕೀಶ್​ ಅವರು ವಯೋಸಹಕ ಕಾಯಿಲೆಗಳಿಂದ ಇಂದು ಬೆಳಗ್ಗೆ ನಿಧನರಾದರು. ಕರುನಾಡ ಕುಳ್ಳನ ಅಗಲಿಕೆಗೆ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES