Sunday, May 5, 2024

ಏ.14ರಂದು ರಾಜ್ಯಕ್ಕೆ ಮೋದಿ ಆಗಮನ: ಕಾರ್ಯಕ್ರಮದ ಡಿಟೇಲ್​ ಇಲ್ಲಿದೆ

ಬೆಂಗಳೂರು : ರಾಜ್ಯದಲ್ಲಿ ಲೋಕ ಎಲೆಕ್ಷನ್‌ ಗೆಲ್ಲೋಕೆ ಬಿಜೆಪಿ ಸರ್ಕಸ್ ಮಾಡುತ್ತಿದೆ. ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು ಬೆಂಗಳೂರಿನಲ್ಲಿ ಅವರು ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.

ಮೈಸೂರಿನ ಬೃಹತ್ ಸಮಾವೇಶದಲ್ಲಿ ನಮೋ ಪಾಲ್ಗೊಳ್ಳಲಿದ್ದಾರೆ. ಮಧ್ಯಪ್ರದೇಶದಿಂದ ಸಂಜೆ 4ಕ್ಕೆ ಮೈಸೂರಿಗೆ ಮೋದಿ ಎಂಟ್ರಿ ಕೊಡಲಿದ್ದಾರೆ. ಬಳಿಕ 4.30ರಿಂದ 5.20ರವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA

ಸಂಜೆ 6.45ಕ್ಕೆ ಮೈಸೂರಿನಿಂದ ಮಂಗಳೂರಿಗೆ  ತೆರಳಲಿದ್ದಾರೆ. ಮಂಗಳೂರಿನಲ್ಲಿ ಸಂಜೆ 7ರಿಂದ 8ರವರೆಗೆ ರೋಡ್ ಶೋದಲ್ಲಿ ಭಾಗಿಯಾಗಲಿದ್ದು ಬಳಿಕ ರಾತ್ರಿ 8.30ಕ್ಕೆ ಮಂಗಳೂರಿನಿಂದ ಕೇರಳದ ಕೊಚ್ಚಿಗೆ ಪಯಣ ಬೆಳಸಲಿದ್ದಾರೆ.

RELATED ARTICLES

Related Articles

TRENDING ARTICLES