Saturday, May 11, 2024

ಗೆದ್ದ ಮುಂಬೈ, ಬಿದ್ದ ಡೆಲ್ಲಿ : ಹಾರ್ದಿಕ್ ನಾಯಕತ್ವದಲ್ಲಿ ಮುಂಬೈಗೆ ಮೊದಲ ಜಯ

ಬೆಂಗಳೂರು : ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಈ ಬಾರಿಯ ಐಪಿಎಲ್​ನಲ್ಲಿ ಮೊದಲ ಗೆಲುವು ದಾಖಲಿಸಿತು. ಈ ಮೂಲಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ತವರು ಅಂಗಳದಲ್ಲಿ ಗೆಲುವಿನ ನಗೆ ಬೀರಿತು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ 5 ವಿಕೆಟ್ ಕಳೆದುಕೊಂಡು 234 ರನ್​ ಗಳಿಸಿತು. 235 ರನ್​ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್​ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಕ್ಯಾಪಿಟಲ್ಸ್​ ಪರ ಪೃಥ್ವಿ ಶಾ 66, ಅಭಿಷೇಕ್​ ಪೊರೆಲ್ 41 ರನ್​ ಗಳಿಸಿದರು. ಕೊನೆಯಲ್ಲಿ ಸ್ಟಬ್ಸ್​ ಕೇವಲ 25 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 71 ರನ್​ ಸಿಡಿಸಿದರು. ಆದರೂ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಮುಂಬೈ ಬೌಲರ್​ಗಳ ಶಿಸ್ತುಬದ್ಧ ದಾಳಿಗೆ ಡೆಲ್ಲಿ ಶರಣಾಯಿತು. ಸ್ಟಬ್ಸ್​ ಏಕಾಂಗಿ ಹೋರಾಟ ವ್ಯರ್ಥವಾಯಿತು. ಮುಂಬೈ 29 ರನ್​ ಗಳಿಂದ ಗೆಲುವಿನ ಖಾತೆ ತೆರೆಯಿತು. ಮುಂಬೈ ಪರ ಜೆರಾಲ್ಡ್​ 4, ಬುಮ್ರಾ 2 ಹಾಗೂ ಶೆಫರ್ಡ್ ಒಂದು ವಿಕೆಟ್ ಪಡೆದರು.

ಡೇವಿಡ್, ಶೆಫರ್ಡ್ ಸ್ಫೋಟಕ ಬ್ಯಾಟಿಂಗ್

ಮುಂಬೈ ಪರ ಡೇವಿಡ್ ಹಾಗೂ ಶೆಫರ್ಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ರೋಹಿತ್ ಶರ್ಮಾ 49, ಇಶಾನ್ ಕಿಶನ್ 42, ಹಾರ್ದಿಕ್ ಪಾಂಡ್ಯ 39, ಟೀಮ್ ಡೇವಿಡ್ ಅಜೇಯ 45, ರೊಮಾರಿಯೊ ಶೆಫರ್ಡ್ 32 ರನ್​ ರನ್ ಸಿಡಿಸಿದರು. ಡೆಲ್ಲಿ ಪರ ಅಕ್ಸರ್ ಪಟೇಲ್ 2, ನಾರ್ಜೆ 2 ಹಾಗೂ ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES