Saturday, May 4, 2024

Tender Coconut: ಬೇಸಿಗೆಯಲ್ಲಿ ಎಳೆನೀರು ಕುಡಿಯುವುದರಿಂದ ನಾವು ಈಸಿಯಾಗಿ ತೂಕವನ್ನು ಕಡಿಮೆ ಮಾಡಬಹುದು!

ನಮ್ಮ ದೇಹಕ್ಕೆ ಬೇಸಿಗೆಯಲ್ಲಿ ನೀರು ಅಧಿಕವಾಗಿ ಬೇಕಾಗುತ್ತದೆ.ಯಾಕೆಂದರೆ ಬೇಸಿಗೆಯಲ್ಲಿ ನಮ್ಮ ದೇಹವು ಬೆವರಿನ ಮೂಲಕ ನಿರಂತರವಾಗಿ ನೀರನ್ನು ಕಳೆದುಕೊಳ್ಳುವುದರಿಂದ ಇದರಿಂದ ನಮ್ಮ ದೇಹಕ್ಕೆ ನೀರಿನ ಪೂರೆಕೈ ಸರಿಯಾಗಿ ಆಗುವುದಿಲ್ಲ. ನಾವು ಈ ಸೀಸನ್​ನಲ್ಲಿ ತೂಕ ಇಳಿಸಬೇಕಾದರೆ ನಾವು ಎಳೆನೀರಿನ್ನು ಕುಡಿಯಬೇಕು. ಹಾಗಿದ್ರೆ ಎಳುನೀರು ಕುಡಿಯುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳಿವೆ ಇದರಿಂದ ನಮ್ಮ ದೇಹದ ತೂಕವನ್ನು ಇಳಿಸಲು ಹೇಗೆ ಸಹಾಯಕ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಎಳೆನೀರು ಕಡಿಮೆ ಕ್ಯಾಲೋರಿ ಪಾನೀಯಗಳಲ್ಲಿ ಒಂದಾಗಿದ್ದು, ಇದು ಸಕ್ಕರೆಯ ಏರಿಕೆಗೆ ಕಾರಣವಾಗದೆ ನಿಮ್ಮನ್ನು ಹೈಡ್ರೇಟ್ ಮಾಡುತ್ತದೆ. ಇದಲ್ಲದೆ, ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಸಿವು ಸ್ವಲ್ಪಮಟ್ಟಿಗೆ ಕಡಿಮೆ ಆಗುರುವುದರಿಂದ ನೀರಿನಾಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹದ ತೂಕ ಕೆಳೆದುಕೊಳ್ಳಲು ಅನುಕೂಲವಾಗಿದೆ.

ಎಳೆನೀರು ತೂಕವನ್ನು ಇಳಿಸಲು ಯಾವ ರೀತಿ ಅನುಕೂಲವಾಗಿದೆ? 

  • ಎಳೆನೀರು ಚಯಾಪಚಯವನ್ನು ಹೆಚ್ಚಿಸಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ತೂಕ ನಷ್ಟಕ್ಕೆ ಅಗತ್ಯವಿರುತ್ತದೆ.
  • ಎಳೆನೀರು ಸೋಡಾಗಳು ಅಥವಾ ಹಣ್ಣಿನ ರಸಗಳಂತಹ ಇತರ ಅನೇಕ ಸಕ್ಕರೆ ಪಾನೀಯಗಳಿಗೆ ಹೋಲಿಸಿದರೆ,  ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.
  • ಎಳೆನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಯಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ.
  • ಎಳೆನೀರು ಎಲೆಕ್ಟ್ರೋಲೈಟ್‌ಗಳ ನೈಸರ್ಗಿಕ ಮೂಲವಾಗಿದ್ದು, ದೇಹದಲ್ಲಿ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.
  • ಎಳೆನೀರು ಹಸಿವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಊಟಕ್ಕೆ ಮುಂಚಿತವಾಗಿ ಎಳೆನೀರನ್ನು ಕುಡಿಯುವುದರಿಂದ ಹಟ್ಟೆ ತುಂಬಿಸಲು ಸಹಾಯ ಮಾಡುತ್ತದೆ
  • ಎಳೆನೀರನ್ನು ವ್ಯಾಯಾಮದ ನಂತರ  ಸೇವಿಸುವುದರಿಂದ ಬೆವರಿನ ಮೂಲಕ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ

ಎಳೆನೀರರು ತೂಕ ನಷ್ಟ ಮಾಡಲು ಸಹಾಯಕವಾಗುತ್ತದೆ ಎಂಬುವುದನ್ನು ನಾವು ಮೇಲಿನ ಕ್ರಮದ ಮೂಲಕ ನೋಡಬಹುದು.

RELATED ARTICLES

Related Articles

TRENDING ARTICLES