Saturday, April 27, 2024

ಅಬ್ಬಬ್ಬಾ! 238 ಬಾರಿ ಸೋತರೂ ಮತ್ತೆ ಚುನಾವಣೆಗೆ ಸ್ಪರ್ಧೆ: ತಮಿಳುನಾಡಿನಲ್ಲೊಬ್ಬ ಸೋಲಿನ ಸರದಾರ ಎಲೆಕ್ಷನ್ ಕಿಂಗ್!

ಮೆಟ್ಟೂರು: ಒಂದಲ್ಲ, ಎರಡಲ್ಲ.. ಬರೋಬ್ಬರಿ 238 ಬಾರಿ ಸೋಲು ಜನಪ್ರತಿನಿಧಿ ಆಗಬೇಕು ಎಂದು ಅವರು ಮಾಡಿದ ಸಾಹಸಗಳು ಒಂದೆರಡಲ್ಲ ಆದರೂ ಒಂದೇ ಒಂದು ಚುನಾವಣೆಯಲ್ಲೂ ಗೆಲ್ಲಲೇ ಇಲ್ಲ ಇಷ್ಟೆಲ್ಲಾ ಆದರೂ ಕೂಡಾ ‘ಮರಳಿ ಯತ್ನವ ಮಾಡು’ ಅನ್ನೋ ಛಲ ಬಿಡದೇ ಇಲ್ಲೊಬ್ಬ ವ್ಯಕ್ತಿ ಸಂಸದನಾಗಬೇಕು ಉದ್ದೇಶದಿಂದ ಇಲ್ಲಿಯವರೆಗೂ ಸುಮಾರು 238 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತ್ತೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸೋಲಿನ ಸರದಾರ ಸ್ಪರ್ಧಿಸುತ್ತಿದ್ದಾರೆ.

ಹೌದು, ಕೆ. ಪದ್ಮರಾಜನ್, ತಮಿಳುನಾಡಿನ ಮೆಟ್ಟೂರು ನಗರದ ನಿವಾಸಿ. ಪದ್ಮರಾಜನ್ ಅವರಿಗೆ ಈಗ 65 ವರ್ಷ ವಯಸ್ಸು1988ರಿಂದಲೇ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿರುವ ಕೆ. ಪದ್ಮರಾಜನ್, ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ.

ಚುನಾವಣೆಯಲ್ಲಿ ಸೋಲುವ ಮೂಲಕವೇ ಹೊಸ ದಾಖಲೆ

ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಸಹಿತ ಕಳೆದುಕೊಳ್ಳೋದು. ಹೀಗೆ ಸುಮಾರು 35 ವರ್ಷಗಳಿಂದಲೂ ಈ ಸೋಲಿನ ಸರಮಾಲೆ ಮುಂದುವರೆದಿದೆ. ಮೊದ ಮೊದಲು ಕೆ. ಪದ್ಮರಾಜನ್ ಅವರ ಈ ಪರಿಪಾಠ ಕಂಡು ಜನರು ಇದೆಂಥಾ ಹುಚ್ಚಾಟ ಎಂದು ಮೂಗು ಮುರಿದರು, ಆಡಿಕೊಂಡರು, ಲೇವಡಿ ಮಾಡಿ ನಕ್ಕರು.ಆದರೆ, ಈಗೀಗ ಜನರಿಗೂ ಇದು ಮಾಮೂಲಾಗಿದೆ.

ಜೊತೆಯಲ್ಲೇ ಸೋಲಿನ ಸರಮಾಲೆಯಿಂದಲೇ ದಾಖಲೆ ಮೆರೆದ ಪದ್ಮರಾಜನ್ ಜನಪ್ರಿಯತೆ ಕೂಡಾ ಸಾಧಿಸಿದ್ದಾರೆ. ಎಲ್ಲರೂ ಗೆಲುವು ಸಾಧಿಸಬೇಕು ಅನ್ನೋ ಆಶಯದಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ಆದರೆ ನಾನು ಆ ರೀತಿ ಅಲ್ಲ ಎಂದು ತಮ್ಮ ಉದ್ದನೆಯ ಮೀಸೆ ತಿರುವುತ್ತಾ ಹೆಗಲ ಮೇಲೆ ಟವಲ್ ಏರಿಸಿಕೊಳ್ತಾರೆ ಪದ್ಮರಾಜನ್. ಫಲಿತಾಂಶದ ವೇಳೆ ಸೋಲು ಎಂದು ಘೋಷಣೆಯಾದಾಗ ಸಂತೋಷ ಆಗುತ್ತಂತೆ ಪದ್ಮರಾಜನ್ ಅವರಿಗೆ.

ಇವರ ಸೋಲಿನ ಸರಮಾಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ

ಈವರೆಗೆ ಕಳೆದ 35 ವರ್ಷಗಳಲ್ಲಿ ಪದ್ಮರಾಜನ್ ಲಕ್ಷಾಂತರ ರೂಪಾಯಿ ಹಣವನ್ನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಕಳೆದುಕೊಂಡಿದ್ದಾರೆ. ಈ ಸೋಲಿನ ಸರಮಾಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಕೂಡಾ ಆಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪದ್ಮರಾಜನ್ ಅವರು ತಮಿಳುನಾಡಿನ ಧರ್ಮಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಎಲೆಕ್ಷನ್ ಕಿಂಗ್ ಎಂದೇ ಜನಪ್ರಿಯತೆ ಸಾಧಿಸಿರುವ ಪದ್ಮರಾಜನ್ ಅವರು, ರಾಷ್ಟ್ರಪತಿ ಚುನಾವಣೆಯಿಂದ ಹಿಡಿದು ಪಂಚಾಯ್ತಿ ಚುನಾವಣೆವರೆಗೂ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

RELATED ARTICLES

Related Articles

TRENDING ARTICLES