Sunday, April 28, 2024

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ: ಬಾಂಬರ್‌ನ ಸುಳಿವು ಪತ್ತೆ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದ ಹೋದ ಎನ್​ಐಎ(NIA)ಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಎಸ್ಕೇಪ್​ ಆಗಿದ್ದಾನೆ.

ಹೌದು,ಸ್ಫೋಟಕ್ಕೂ ಮುನ್ನ 2 ತಿಂಗಳು ಇತ ತಮಿಳುನಾಡಿನಲ್ಲಿದ್ದ. ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದ್ದ ಎನ್​ಐಎಗೆ ಇದನ್ನು ತಮಿಳುನಾಡಿನ ಮಾಲ್​ವೊಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್​​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್​​ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, ಎನ್​ಐಎ ಅಧಿಕಾರಿಗಳು ಡಿಎನ್​​ಎ ಟೆಸ್ಟ್​ಗೆ ನೀಡಿದ್ದಾರೆ.

 ಇಬ್ಬರು ಕರ್ನಾಟಕದವರೆಂಬ ಬಗ್ಗೆ ಮಾಹಿತಿ 

NIA ತನಿಖೆ ವೇಳೆ ಆ ಇಬ್ಬರು ಕರ್ನಾಟಕದವರೆಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅವರು ಶಿವಮೊಗ್ಗೆ ಜಿಲ್ಲೆಯ ಮುಸಾವೀರ್ ಮತ್ತು ಹುಸೇನ್ ಶಬೀದ್ ಎಂಬ ಕುರಿತು ಸುಳಿವು ದೊರೆತಿದೆ. ಇವರು ಎರಡು ತಿಂಗಳು ತಮಿಳುನಾಡಿನ ಲಾಡ್ಜ್​​ನಲ್ಲಿ ಉಳಿದುಕೊಂಡಿರುವುದು ಕೂಡ ಪತ್ತೆಯಾಗಿದೆ.

ಹಾಗಾದರೆ ಶಂಕಿತರಿಗೂ ತಮಿಳುನಾಡಿಗೂ ಏನು ಸಂಬಂಧ ಎಂಬ ಬಗ್ಗೆ ತನಿಖೆ ಶುರುವಾಗಿದ್ದು, ಸದ್ಯ ಸಿಸಿಟಿವಿಗಳ ಆಧರಿಸಿ ಆರೋಪಿಗಳ ಜಾಲ ಪತ್ತೆ ಹಚ್ಚಲಾಗುತ್ತಿದೆ.

RELATED ARTICLES

Related Articles

TRENDING ARTICLES