Saturday, April 27, 2024

ರಷ್ಯಾ ಒಕ್ಕೂಟಕ್ಕೆ ಭಾರತದ ನೂತನ ರಾಯಭಾರಿಯಾಗಿ ವಿನಯ್​ ಕುಮಾರ್ ನೇಮಕ!

ದೆಹಲಿ: ಐಎಫ್ಎಸ್ ಅಧಿಕಾರಿ ವಿನಯ್​ ಕುಮಾರ್ ಅವರನ್ನು ಭಾರತದ ರಾಯಭಾರಿಯಾಗಿ ರಷ್ಯಾದ ಒಕ್ಕೂಟಕ್ಕೆ ನೇಮಕ ಮಾಡಿ ಆದೇಶಿಸಲಾಗಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯಾಲಯವು (ಮಾರ್ಚ್​ 19) ರಂದು ಮಂಗಳವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಪ್ರಸ್ತುತ ಮಯನ್ಮಾರ್ ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿನಯ್​ ಕುಮಾರ್ ಅವರು ಇದೀಗ ರಷ್ಯಾ ಒಕ್ಕೂಟಕ್ಕೆ ರಾಯಭಾರಿಯಾಗಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ 5.4 ತೀವ್ರತೆಯ ಪ್ರಭಲ ಭೂಕಂಪನ

1992 ರ ಐಎಫ್​ಎಸ್​ ಅಧಿಕಾರಿಯಾಗಿರುವ ವಿನಯ್​ ಕುಮಾರ್​ ಖರಗ್​ ಪುರದ ಐಐಟಿ ಪದವಿದರರಾಗಿದ್ದಾರೆ. ಇವರು, 2018 ರಿಂದ 2020 ರ ವರೆಗೆ ಭಾರತೀಯ ರಾಯಭಾರಿಯಾಗಿ ಕಾಬೂಲ್​ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿಯಾಗಿಯೂ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಹಲವು ದೇಶಗಳಲ್ಲಿ ಭಾರತದ ಪರವಾಗಿ ರಾಜತಾಂತ್ರಿಕ ವ್ಯವಹಾರಗಳನ್ನು ನಿರ್ವಹಿಸಿರುವ ವಿನಯ್​ ಕುಮಾರ್ ಅವರಿಗೆ ಇದೀಗ ರಷ್ಯಾ ಒಕ್ಕೂಟದ ಜವಾಬ್ದಾರಿಯನ್ನು ನೀಡಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾರ್ಚ್​19 ರ  ಮಂಗಳವಾರ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES