Friday, May 3, 2024

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಜಾಮೀನು

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರೀವಾಲ್​ ಅವರಿಗೆ ಬಿಗ್ ರಿಲೀಫ್​ ಸಿಕ್ಕಿದೆ. ನ್ಯಾಯಾಲಯವು ಜಾಮೀನು ಮಂಜೂರಾಗಿದೆ.

ದೆಹಲಿ ಅಕ್ರಮ ಅಬಕಾರಿ (ಮದ್ಯ) ನೀತಿ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ನೀಡಿದೆ.

ಇಂದು ಅರವಿಂದ್‌ ಕೇಜ್ರಿವಾಲ್‌ ಕೋರ್ಟ್‌ಗೆ ಹಾಜರಾಗುಂತೆ ಸೂಚನೆ ನೀಡಿತ್ತು. 15,000 ಬಾಂಡ್ ಮತ್ತು 1 ಲಕ್ಷದ ಶ್ಯೂರಿಟಿಯೊಂದಿಗೆ ಅರವಿಂದ ಕೇಜ್ರಿವಾಲ್​​ಗೆ ಜಾಮೀನು ಮಂಜೂರು ಮಾಡಿದೆ.

8 ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಲು ಅರವಿಂದ್ ಕೇಜ್ರೀವಾಲ್​ ವಿಫಲರಾಗಿದ್ದರು. ಹೀಗಾಗಿ, ಇಡಿ ಅಧಿಕಾರಿಗಳು ಕೇಜ್ರಿವಾಲ್​ ವಿರುದ್ಧ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮೊರೆ ಹೋಗಿದ್ದರು. ಇದೇ 16ರಂದು ತಮ್ಮ ಮುಂದೆ ಹಾಜರಾಗುವಂತೆ ಸಿಎಂಗೆ ನ್ಯಾಯಾಧೀಶರು ಸಮನ್ಸ್​ ಜಾರಿ ಮಾಡಿದ್ದರು.

ಇಡಿ ಬಿಜೆಪಿ ಆದೇಶದಂತೆ ಕೆಲಸ ಮಾಡ್ತಿದೆ

ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ, ನಿಮ್ಮ ನೋಟಿಸ್​​ ಅನ್ನು ವಾಪಸ್ಸು ಪಡೆದುಕೊಳ್ಳಿ. ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಅರವಿಂದ್​​​ ಕೇಜ್ರಿವಾಲ್ ಹೇಳಿದ್ದರು. ಇಡಿ ಬಿಜೆಪಿ ಆದೇಶದ ಮೇರೆಗೆ ಈ ಕೆಲಸವನ್ನು ಮಾಡುತ್ತಿದೆ. ಇನ್ನು ಇದನ್ನು ನಾನು ಒಪ್ಪುವುದಿಲ್ಲ, ತಕ್ಷಣ ತನ್ನ ಮೇಲೆ ಜಾರಿ ಮಾಡಿದ ನೋಟಿಸ್​​​ ವಾಪಸ್ಸು ಪಡೆಯುವಂತೆ ಇಡಿಗೆ ಪತ್ರದ ಮೂಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.

RELATED ARTICLES

Related Articles

TRENDING ARTICLES