Sunday, May 5, 2024

ಸಾವರ್ಕರ್, ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ : ಸಿದ್ದರಾಮಯ್ಯ

ಬೆಂಗಳೂರು : ಕೇಸರಿ ಶಾಲು ಹಾಕಿದ ತಕ್ಷಣ ದೇಶ ಭಕ್ತರಾಗುತ್ತಾರಾ? ಆರ್​ಎಸ್​ಎಸ್​ನ ಸಾವರ್ಕರ್, ಹೆಡ್ಗೆವಾರ್ ಯಾರೂ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.

ವಿಧಾನ ಪರಿಷತ್​ನಲ್ಲಿ ಮಾತನಾಡಿದ ಅವರು, 1942ರ ಕ್ವಿಟ್ ಇಂಡಿಯಾ ನಡೆಯುವಾಗ ಎಲ್ಲಿದ್ದರು ಇವರು? ಬ್ರಿಟೀಷರ ಜೊತೆ ಶಾಮೀಲಾಗಿದ್ದರು. ಆರ್​ಎಸ್​ಎಸ್​ನವರು ಬ್ರಿಟೀಷರ ಜೊತೆ ಶಾಮೀಲಾಗಿದ್ದರು ಎಂದು ದೂರಿದರು.

ದೇಶಭಕ್ತಿ ಬಗ್ಗೆ ಮಾತನಾಡೋಕೆ ಇವರಿಗೆ ಯಾವ ನೈತಿಕತೆ ಇದೆ. ಸಮಾಜ ಹೊಡೆಯುವ ಕೆಲಸ ಮಾಡಿದರವರು ಇವ್ರು. ಬಿಜೆಪಿ ಯಾವಾಗಲೂ ಶ್ರೀಮಂತರ ಪರ ಇದೆ. ಇವತ್ತೂ ಕೂಡ ಪ್ರವೋಕ್ ಮಾಡ್ತಾ ಇದ್ದಾರೆ. ನಾವು ಗ್ಯಾರಂಟಿ ಜಾರಿ ತರುವಾಗ ಇದೇ ನರೇಂದ್ರ ಮೋದಿ ಹೇಳ್ತಾರೆ, ಈ ಗ್ಯಾರಂಟಿ ಕರ್ನಾಟಕದಲ್ಲಿ ಜಾರಿ ಆಗಲ್ಲ ಅಂತ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಅಂತೀರಲ್ಲ.. ಎಲ್ಲಿದೆ ಸಬ್ ಕಾ ಸಾತ್? ಎಂದು ಪ್ರಶ್ನಿಸಿದರು.

ಸುಳ್ಳಿನ ನಾಟಕ ಜನ ನೋಡ್ತಿದ್ದಾರೆ

ನೀವು ದೇಶ ಹೊಡೆಯುವ ಕೆಲಸ ಮಾಡಿದವರು. ಅಂದು ನರೇಂದ್ರ ಮೊದಿ ಗುಜರಾತ್ ನಾಟ್ ಬೆಗ್ಗಿಂಗ್ ಅಂದ್ರು. ಇವಾಗ ನಾಚಿಕೆ ಆಗಲ್ವಾ ನಿಮಗೆ? ನಿಮ್ಮ ಸುಳ್ಳಿನ ಈ ನಾಟಕ ಜನ ನೋಡ್ತಾ ಇದ್ದಾರೆ. ಹಿಂಬಾಗಿಲಿನಿಂದಲೇ ಇವರು ಬರೋದು. ನಾಚಿಕೆ ಆಗಲ್ವಾ ಹಿಂಬಾಗಿಲಿನಿಂದ ಬಂದು ಅಧಿಕಾರ ಮಾಡೋಕೆ? ಕಾಂಗ್ರೆಸ್ ಮುಕ್ತ ದೇಶ ಮಾಡ್ತೀವಿ ಅಂತಾರಲ್ಲ ಎಂದು ಕಿಡಿಕಾರಿದರು.

ನಿಮ್ಮ ಬೆದರಿಕೆಗೆ ನಾನು ಬಗ್ಗಲ್ಲ

ನಾವು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡ್ತೀವಿ. ಇವರಿಗೆ ಹಸಿದವರು, ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಗದ್ದಲ ಹೆಚ್ಚಾಯಿತು. ಆಗ ಸಿಎಂ ಸಿದ್ದರಾಮಯ್ಯ, ನಿಮ್ಮ ಬೆದರಿಕೆಗೆ ನಾನು ಬಗ್ಗಲ್ಲ. ನಿಮ್ಮ ಹತ್ತರಷ್ಟು ನಾನು ಕೂಗಾಡ್ತೀನಿ. ನಮ್ಮ ಹೋರಾಟಗಳೇ ಸಾಕು ಎಂದು ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES