Sunday, April 28, 2024

ಇಂದಿನಿಂದ ವಿಧಾನಸಭೆಯ ಬಜೆಟ್ ಅಧಿವೇಶನ: ಫೆ.16ಕ್ಕೆ ಬಜೆಟ್​ ಮಂಡನೆ!

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, 23ರವರೆಗೆ ನಡೆಯಲಿದೆ. ಇಂದು ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದು, ಫೆ.16ರಂದು ಬಜೆಟ್ ಮಂಡನೆ ನಿರೀಕ್ಷೆಯಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದ‌ರ್ ಅವರು ಮಾಹಿತಿ ನೀಡಿದ್ಧಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು. ಫೆಬ್ರವರಿ 12ರಿಂದ 23ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ಅಂದರೆ ಫೆಬ್ರವರಿ 12ರಂದು ಸದನ ಉದ್ದೇಶಿಸಿ ರಾಜ್ಯಪಾಲ ಭಾಷಣ ಇರಲಿದೆ. ಬಳಿಕ ಫೆ.16ರಂದು ಸಿಎಂ ಸಿದ್ದರಾಮಯ್ಯ 2024-25ರ ಆಯವ್ಯಯ​ ಮಂಡನೆ ಮಾಡುತ್ತಾರೆ ಎಂದರು. ಇನ್ನು ಒಟ್ಟು 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: ದಿನ ಭವಿಷ್ಯ :ಇಂದು ರವಿಯೋಗ, ಈ ರಾಶಿಗೆ ಮಹಾಶಿವನ ಆಶೀರ್ವಾದ ದೊರೆಯಲಿದೆ!

ಫೆ. 16ರಂದು ಸಿದ್ದರಾಮಯ್ಯ ಬಜೆಟ್‌ ಮಂಡನೆ :

ಕರ್ನಾಟಕದ ಮುಖ್ಯಮಂತ್ರಿ, ಹಣಕಾಸು ಸಚಿವ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸುವ ದಿನಾಂಕ ನಿಗದಿಯಾಗಿದ್ದು, ಫೆಬ್ರವರಿ 16ರಂದು ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಂಡನೆಯಾಗುತ್ತಿರುವ 2ನೇ ಬಜೆಟ್ ಇದಾಗಿದೆ.

2024-25ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಾಣ ಮಾಡಲಿದ್ದಾರೆ. 2013 ರಿಂದ 2018ರ ತನಕ ಮುಖ್ಯಮಂತ್ರಿಯಾಗಿ, ಹಿಂದೆ ಹಣಕಾಸು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಒಟ್ಟು 14 ಬಾರಿ ಅವರು ಬಜೆಟ್ ಮಂಡಿಸಿದ್ದಾರೆ.

RELATED ARTICLES

Related Articles

TRENDING ARTICLES