Saturday, May 4, 2024

ಚಳಿಗಾಲದಲ್ಲಿ ಎಳ್ಳು, ಬೆಲ್ಲ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ನಾವು ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳಿಂದ ದೂರ ಇರಬೇಕು ಅಂದ್ರೆ ಎಳ್ಳು ಹಾಗೂ ಬೆಲ್ಲವನ್ನು ಸೇವಿಸಬೇಕು.ಇದರಿಮದ ನಮಗೆ ಎಷ್ಟೆಲ್ಲಾ ಆರೋಗ್ಯದ ಲಾಭಗಳಿವೆ ಎಂಬುವುದನ್ನೂ ತಿಳಿಯೋಣ..

ದೇಹಕ್ಕೆ ಚೈತನ್ಯ ಹೆಚ್ಚಿಸುತ್ತದೆ

ಬೆಲ್ಲವು ಕಾರ್ಬೊಹೈಡ್ರೇಟ್‌ ಕೇಂದ್ರಿತ ಮೂಲವಾಗಿದೆ. ಇದು ದೇಹಕ್ಕೆ ತ್ವರಿತವಾಗಿ ಚೈತನ್ಯ ಒದಗಿಸುವಂತೆ ಮಾಡುತ್ತದೆ. ಎಳ್ಳಿನಲ್ಲಿ ಕೊಬ್ಬಿನಾಂಶ ಹಾಗೂ ಪ್ರೊಟೀನ್‌ ಸಮೃದ್ಧವಾಗಿದ್ದು, ಇದು ನಮ್ಮ  ಶಕ್ತಿಯ ಮಟ್ಟ ಹೆಚ್ಚಿಸುತ್ತದೆ.

ಪ್ರೊಟೀನ್‌ ಸಮೃದ್ಧ

ಎಳ್ಳಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಮಗ್ನೇಶಿಯಂ, ಫಾಸ್ಪರಸ್‌ ಹಾಗೂ ಜಿಂಕ್‌ನಂತಹ ಪ್ರೊಟೀನ್‌ ಅಂಶಗಳಿಂದ ಸಮೃದ್ಧವಾಗಿದೆ. ಬೆಲ್ಲವು ಕಬ್ಬಿನಿಂದ ತಯಾರಾಗುವ ಕಾರಣ ಇದರಲ್ಲಿ ಕಬ್ಬಿಣಾಂಶ, ಮಗ್ನೇಶಿಯಂ ಅಂಶ, ಪೊಟ್ಯಾಶಿಯಂ ಹಾಗೂ ವಿಟಮಿನ್‌ ಅಂಶಗಳು ಸಮೃದ್ಧವಾಗಿದೆ.

ದೇಹವನ್ನು ಬೆಚ್ಚಗಿರಿಸುತ್ತದೆ

ಎಳ್ಳು ಹಾಗೂ ಬೆಲ್ಲ ಎರಡಲ್ಲೂ ದೇಹವನ್ನು ಬೆಚ್ಚಗಿರಿಸುವ ಶಕ್ತಿ ಇದೆ. ಆ ಕಾರಣಕ್ಕೆ ಚಳಿಗಾಲದಲ್ಲಿ ಎಳ್ಳು ಬೆಲ್ಲವನ್ನು ತಿನ್ನುವುದರಿಂದ ದೇಹ ಬೆಚ್ಚಗಿದ್ದು, ಎದುರಾಗುವ ಸಮಸ್ಯೆಗಳು ದೂರಾಗುತ್ತವೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಬೆಲ್ಲವು ಜೀರ್ಣಶಕ್ತಿ ಹೆಚ್ಚಿಸುವ ಗುಣಗಳಿಂದ ಪ್ರಸಿದ್ಧಿ ಪಡೆದಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ. ಎಳ್ಳಿನಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ

ಸಕ್ಕರೆಗೆ ಹೋಲಿಸಿದರೆ ಬೆಲ್ಲದಲ್ಲಿ ಗ್ಲೈಸೆಮಿಕ್‌ ಇಂಡೆಕ್ಸ್‌ ಪ್ರಮಾಣ ಕಡಿಮೆ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಬಯಸುವವರು ಬೆಲ್ಲ ಸೇವಿಸುವುದು ಉತ್ತಮ.

ಹೀಗೆ ನಾವು ನಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಆರೋಗ್ಯ ವೃದ್ದಿಯಾಗುತ್ತದೆ.

 

RELATED ARTICLES

Related Articles

TRENDING ARTICLES