Wednesday, May 8, 2024

ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣ : ಯಾದಗಿರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಯಾದಗಿರಿ : ಬಡವರ ಹೊಟ್ಟೆ ಸೇರಬೇಕಿದ್ದ 6,077 ಕ್ವಿಂಟಾಲ್ ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳತನಕ್ಕೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಸವೇಶ್ವರ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ಶಹಾಪುರ ನಗರದ ಹೊರ ವಲಯದಲ್ಲಿರುವ ಒಕ್ಕಲುತನ ಹುಟ್ಟುವಳಿ ಮಾರಾಟ ಗೋದಾಮಿನಿಂದಲೇ ಕಳ್ಳತನ ಆಗಿದ್ದು ಅಧಿಕಾರಿಗಳ‌ ನಿರ್ಲಕ್ಷ್ಯ ಎಂದು ಕಾಣುತ್ತಿದೆ. ಈ ಹಿಂದೆಯೇ ಇದೇ ಸಚಿವರ ಕ್ಷೇತ್ರದಿದಲ್ಲೇ ಅಕ್ರಮ ಅಕ್ಕಿ ಕಳ್ಳತನ ಆದ್ರು ಅಧಿಕಾರಿಗಳು ಸೇರಿದಂತೆ ಪ್ರಬಲ ರಾಜಕೀಯ ಶಕ್ತಿಗಳಿಂದ ಪ್ರಕರಣ ಮುಚ್ಚಿ ಹೋಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

6,077 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಡಿತರ ಅಕ್ಕಿ ಕಳ್ಳತನ ದೂರುದಾರನೇ ತಿಂಗಳಿಗೆ 50 ಸಾವಿರ ರೂಪಾಯಿ ಕಮಿಷನ್ ತೆಗೆದುಕೊಳ್ಳುತ್ತಿದ್ದ ಎನ್ನುವ ಮಾಹಿತಿ ಕೂಡಾ ಪೋಲಿಸ್ ತನಿಖೆ ವೇಳೆ ಬಟಬಯಲು ಆಗಿದೆ. ಬಡವರ ಪಡಿತರ ಅಕ್ಕಿ ನಾಪತ್ತೆ ಪ್ರಕರಣವನ್ನ ರಾಜ್ಯಸರಕಾರ ಸಿಐಡಿ ಇಲ್ಲವೇ ನ್ಯಾಯಾಂಗ ತನಿಖೆಗೆ ನೀಡಬೇಕೆಂದು ಪ್ರತಿಭಟನೆ ನಿರತರ ಒತ್ತಾಯ ಮಾಡಿದ್ದಾರೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆ ನಿರತರ ಆಗ್ರಹ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES