Wednesday, January 22, 2025

ಭಯಾನಕ ದೃಶ್ಯ : ಸೈಕಲ್ ಮತ್ತು ಬೈಕ್ ಸವಾರರು ಸ್ವಲ್ಪದರಲ್ಲೇ ಪಾರು!

ಉಡುಪಿ : ಪಿಕಪ್ ವಾಹನ ಚಾಲಕನೊಬ್ಬ ಅತಿವೇಗವಾಗಿ ಬಂದು ಮಿಲ್ಕ್ ಬೂತ್‌ನ ಎದುರಿಗಿದ್ದ ಹಾಲಿನ ಕ್ರೇಟ್‌ ಗಳಿಗೆ ಕ್ಷಣಾರ್ಧದಲ್ಲಿ ಡಿಕ್ಕಿ ಹೊಡೆದು ಹೋದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಡುಪಿ ನಗರದ ಕಡಿಯಾಳಿಯಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಮಿಲ್ಕ್ ಬೂತ್ ನ ಎದುರು ಹತ್ತಾರು ಹಾಲಿನ ಕ್ರೇಟ್ ಗಳನ್ನು ಜೋಡಿಸಿಡಲಾಗಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರನನ್ನು ತಪ್ಪಿಸಲು ಹೋದ ಪಿಕಪ್ ವಾಹನ ನಿಯಂತ್ರಣ ತಪ್ಪಿ ನೇರವಾಗಿ ಹಾಲಿನ ಕ್ರೇಟ್ ಗಳಿದ್ದ ಕಡೆ ನುಗ್ಗಿದೆ.

ಘಟನೆಯಲ್ಲಿ ರಸ್ತೆಯಲ್ಲಿದ್ದ ಹಾಲು ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿಯಾಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ. ಈ ವೇಳೆ ಸೈಕಲ್‌ ಮತ್ತು ದ್ವಿಚಕ್ರ (ಬೈಕ್) ವಾಹನ ಸವಾರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES