Monday, May 6, 2024

ಪಾಕ್ ಔಟ್ : ಭಾರತ VS ನ್ಯೂಜಿಲೆಂಡ್ ನಡುವೆ ಸೆಮಿಸ್ ಕಾಳಗ ಫಿಕ್ಸ್

ಬೆಂಗಳೂರು : ವಿಶ್ವಕಪ್​-2023 ಟೂರ್ನಿಯಿಂದ ಪಾಕಿಸ್ತಾನ ತಂಡ ನಿರ್ಗಮಿಸುವುದರೊಂದಿಗೆ ಭಾರತ ತಂಡ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಕಾದಾಡುವುದು ಪಕ್ಕಾ ಆಗಿದೆ.

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ (ಐದನೇ ಪಂದ್ಯದಲ್ಲಿ) ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದರಿಂದ ಸೆಮಿಫೈನಲ್ ಪಂದ್ಯ ಕುತೂಹಲ ಮೂಡಿಸಿದೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಭಾರತ ಹಾಗೂ ನ್ಯೂಜಿಲಂಡ್ ತಂಡಗಳು 10 ಪಂದ್ಯಗಳನ್ನು ಆಡಿವೆ. ಈ ಪೈಕಿ ನ್ಯೂಜಿಲೆಂಡ್ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಭಾರತ 4 ಪಂದ್ಯಗಳಲ್ಲಿ ಜಯ ಗಳಿಸಿದೆ. ಒಂದು ಪಂದ್ಯ ಮಾತ್ರ ರದ್ದಾಗಿದೆ.

ವಿಶ್ವಕಪ್​ನಲ್ಲಿ ಭಾರತ-ಕಿವೀಸ್ ಬಲಾಬಲ

ಇನ್ನೂ ಈ ಬಾರಿಯ ವಿಶ್ವಕಪ್​-2023 ಟೂರ್ನಿಯಲ್ಲಿ ಭಾರತ ಎಂಟು ಪಂದ್ಯಗಳನ್ನು ಆಡಿದ್ದು ಎಂಟೂ ಪಂದ್ಯಗಳನ್ನು ಗೆದ್ದಿದೆ. 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೂ ಒಂದು ಪಂದ್ಯ ಬಾಕಿ ಇದೆ. ನ್ಯೂಜಿಲೆಂಡ್ ತಂಡ 9 ಪಂದ್ಯಗಳನ್ನು ಆಡಿದ್ದು, 5 ಪಂದ್ಯ ಗೆದ್ದು 4 ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ 10 ಅಂಕಗಳೊಂದಿಗೆ ಪಾಯಿಂಟ್ಸ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.​

RELATED ARTICLES

Related Articles

TRENDING ARTICLES