Saturday, May 4, 2024

ಹಮಾಸ್- ಇಸ್ರೇಲ್​ನಲ್ಲಿ ಕೋಲಾರ ಮೂಲದ ಮಹಿಳೆ: ಬಂಕರ್​ ನಲ್ಲಿ ಆಶ್ರಯ!

ಕೋಲಾರ: ಇಸ್ರೇಲ್ ಮೇಲೆ ಹಮಾಸ್ ದಾಳಿ ಮುಂದುವರೆದಿದ್ದು, ಕೋಲಾರ ಜಿಲ್ಲೆಯ ಮಾಲೂರು ಮೂಲದ ಮಹಿಳೆ ಸಿಲುಕಿಕೊಂಡಿದ್ದಾರೆ.

ಶಾಂತಿ ಆಲ್ಮೇಡಾ ಎಂಬುವವರು ಇಸ್ರೇಲ್​ನಲ್ಲಿ ಕಳೆದ 10 ವರ್ಷಗಳಿಂದ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಸದ್ಯ ಈಗ ಬಂಕರ್​​ನಲ್ಲಿ ಆಶ್ರಯ ಪಡೆದಿದ್ದಾರೆಂಬ ಮಾಹಿತಿ ಸಿಕ್ಕಿದೆ. ಇಸ್ರೇಲ್ ಸರ್ಕಾರದಿಂದ ತುರ್ತು ಸೈರನ್ ಮೊಳಗಿದ ಹಿನ್ನೆಲೆ, ಸದ್ಯ ಬಂಕರ್​​ನಲ್ಲಿ ಶಾಂತಿ ಆಲ್ಮೇಡಾ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ಇಸ್ರೇಲ್​ ಹಮಾಸ್​ ಯುದ್ದ: ಬೆಂಜಮಿನ್ ನೇತನ್ಯಾಹು ಜೊತೆಗೆ ಮೋದಿ ಮಾತುಕತೆ!

ಶಾಂತಿ ಆಲ್ಮೇಡಾ ಅವರ ಪತಿ ಗ್ರೇಶನ್ ಆಲ್ಮೇಡಾ ಮಾಲೂರು ತಾಲೂಕಿನ ಖಾಸಗಿ ಚಾನಲ್​​​ನಲ್ಲಿ ಕೆಲಸ ಮಾಡುತ್ತಿದ್ದು, ಶಾಂತಿ ಇಸ್ರೇಲ್​ನಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಶಾಂತಿ ಆಲ್ಮೇಡಾ ಇರುವ ಪ್ರದೇಶದಲ್ಲಿ ಯಾವುದೇ ಅಪಾಯವಿಲ್ಲ ಎಂದು ಮಾಹಿತಿ ಸಿಕ್ಕಿದ್ದು, ಕೇವಲ ಬಾಂಬ್ ಹಾಗೂ ರಾಕೆಟ್ ಸದ್ದು ಮಾತ್ರ ಕೇಳಿಸುತ್ತಿದೆ ಸುರಕ್ಷಿತವಾಗಿ ಇದ್ದೇವೆ ಎಂದು ಶಾಂತಿ ತಿಳಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದೇನೆಂದು ಶಾಂತಿ ಆಲ್ಮೇಡಾ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES