Saturday, May 18, 2024

ಇಸ್ರೇಲ್​ ಹಮಾಸ್​ ಯುದ್ದ: ಬೆಂಜಮಿನ್ ನೇತನ್ಯಾಹು ಜೊತೆಗೆ ಮೋದಿ ಮಾತುಕತೆ!

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

ಭಯೋತ್ಪಾದಕರ ದಾಳಿಯಿಂದ ಅನೇಕ ಸಾವು-ನೋವುಗಳನ್ನು ಅನುಭವಿಸಿರುವ ಇಸ್ರೇಲ್​​ಗೆ ಪ್ರಧಾನಿ ಮೋದಿ ಅವರು ಧೈರ್ಯ ತುಂಬಿದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ Xನಲ್ಲಿ ಟ್ವೀಟ್​​ ಮಾಡಿದ್ದಾರೆ.

ಇದನ್ನೂ ಓದಿ: ಅನಧಿಕೃತ ಪಟಾಕಿ ಗೋದಾಮಿನ ಮೇಲೆ ತಹಶಿಲ್ದಾರ್​ ಶಿವರಾಜ್​ ನೇತೃತ್ವದಲ್ಲಿ ದಾಳಿ!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್​​ನ ಸದ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು, ಈ ಸಂಕಷ್ಟದ ಸಮಯದಲ್ಲಿ ಭಾರತೀಯರು ಇಸ್ರೇಲ್​​ ಜತೆಗೆ ನಿಂತಿದ್ದಾರೆ. ಭಾರತವು ಎಲ್ಲ ರೀತಿ ಭಯೋತ್ಪಾದನೆಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಎಕ್ಸ್​ನಲ್ಲಿ​​ ಮೋದಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES