Monday, May 6, 2024

20 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಬೀದರ್ : ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿ ಡಕಾಯಿತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬೀದರ್ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ಒಟ್ಟು 20 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಗಾಂಧಿ ಗಂಜ್ ಠಾಣೆಯ ಎರಡು ಪ್ರಕರಣಗಳನ್ನು ಭೇಧಿಸಿ ತನಿಖೆ‌ ಮುಂದುವರಿಸಿದ್ದಾರೆ.

ಆರೋಪಿಯಿಂದ ಎರಡು ಕ್ಯಾಮೆರಾ, 10 ಗ್ರಾಂ ಬಂಗಾರದ ಚೈನ್, ಹಾಗೂ 2,000 ನಗದು ಸೇರಿದಂತೆ ಒಟ್ಟು 1.43 ಲಕ್ಷ ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

ಆರೋಪಿಯು ತಾಂಡೂರ, ಹೈದ್ರಾಬಾದ್, ಕಲಬುರಗಿ ನಗರಗಳಲ್ಲಿ ಒಟ್ಟು 20 ಸುಲಿಗೆ ಪ್ರಕರಣಗಳನ್ನು ಬಾಗಿಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಜಾಲ‌ ಬೀಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್‌.ಪಿ ಚನ್ನಬಸವಣ್ಣ ಲಂಗೋಟಿ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ನೀಡಿದ್ದಾರೆ.

ಇದನ್ನೂ ಓದಿ : ಅಶ್ವತ್ಥನಾರಾಯಣ ವಿರುದ್ಧ ಮೈಸೂರಿನಲ್ಲಿ FIR ದಾಖಲು

ಟಾಮ್ ಟಾಮ್ ಮತ್ತು ಬೈಕ್ ನಡುವೆ ಡಿಕ್ಕಿ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ರಾಹುತನಕಟ್ಟಿ  ಕ್ರಾಸ್ ಬಳಿ ಟಾಮ್ ಟಾಮ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದೆ. ಟಾಮ್ ಟಾಮ್ ನಲ್ಲಿ ಪ್ರಯಾಣಿಸುತ್ತಿದ್ದ 12ಜನರ ಪೈಕಿ 6 ಜನರಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ರಾಣೆಬೆನ್ನೂರು ನಗರದಿಂದ ರಾಹುತನಕಟ್ಟಿ ಗ್ರಾಮದ ಕಡೆ ಹೊರಟಿದ್ದ ಟಾಮ್ ಟಾಮ್ ಗಾಡಿ, ಮೆಡ್ಲೇರಿ ಕಡೆ ಇಂದ ಬಂದ ಬೈಕ್ ಡಿಕ್ಕಿಯಾಗಿದೆ. ಇಬ್ಬರು ವಾಹನ ಚಾಲಕರ ಸ್ಥಿತಿ ಗಂಭೀರವಾಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES