Monday, December 23, 2024

ಜನರ ಪ್ರೀತಿ ವಿಶ್ವಾಸಗಳೇ ನನಗೆ ಶ್ರೀರಕ್ಷೆ : ಸಚಿವ ಎಸ್.ಟಿ ಸೋಮಶೇಖರ್

ಬೆಂಗಳೂರು : ಜನರ ಈ ಪ್ರೀತಿ ವಿಶ್ವಾಸಗಳೇ ನನಗೆ ಶ್ರೀರಕ್ಷೆ. ಅವರ ಈ ಬೆಂಬಲ ನನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ‌ ಸೋಮಶೇಖರ್ ಹೇಳಿದರು.

ಯಶವಂತಪುರ ಮತಕ್ಷೇತ್ರದ ಮಂಗನಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಪವರ್ ಟಿವಿ ಜೊತೆ ಮಾತನಾಡಿದರು. ಪ್ರಚಾರ ಕಾರ್ಯಕ್ಕೆ ವೃದ್ಧರು, ಸ್ತ್ರೀಯರು, ಯುವಜನರಾದಿಯಾಗಿ ನನ್ನ ಆಗಮನದ ನಿರೀಕ್ಷೆಯಲ್ಲಿರುವುದನ್ನು ನೋಡಿ ಮನ ತುಂಬಿ ಬಂದಿದೆ ಎಂದು ತಿಳಿಸಿದರು.

ಎಸ್.ಟಿ ಸೋಮಶೇಖರ್ ಅವರು ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಹೋದ ಕಡೆಯಲ್ಲೆಲ್ಲಾ ಜನರೋ ಜನ. ಕ್ಷೇತ್ರದಲ್ಲಿ ಸತತವಾಗಿ ಆರಿಸಿ ಬಂದಿದ್ದ ನಾನು ಮಂತ್ರಿಯಾಗಿಯು ಕಾರ್ಯ ನಿರ್ವಹಿಸಿದ್ದೇನೆ. ನನಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಸಿದ್ದ’ರಾಮ’ಯ್ಯಗೆ ‘ರಾಮ ಬೇಕು ಆಂಜನೇಯ’ ಬೇಡ್ವೇ? : ಬಿ.ಸಿ ಪಾಟೀಲ್ ಕಿಡಿ

ಇದೇ ವೇಳೆ ಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ, ಮಂಗನಹಳ್ಳಿಯಲ್ಲಿ ವೀರಾಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಹಾಜರಿದ್ದರು.

ಸಚಿವ ಎಸ್.ಟಿ ಸೋಮಶೇಖರ್ ಅವರು ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಡಿಗೇಹಳ್ಳಿ, ಸೂಲಿಕೆರೆ, ರಾಮೋಹಳ್ಳಿ ಹಾಗೂ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES