Saturday, April 27, 2024

ಜಗದೋದ್ಧಾರನ ಆರಾಧನೆಯಲ್ಲಿ ಆಶಿಕಾ ಗಾನಬಜಾನ..!

ಬಾತ್​ರೂಂ ಸಿಂಗರ್ ಆಗಿದ್ದ ಆಶಿಕಾ ರಂಗನಾಥ್, ಪಕ್ಕಾ ಪ್ರೊಫೆಷನಲ್ ಕ್ಲಾಸಿಕಲ್ ಸಿಂಗರ್ ಆಗಿ ಮಿಂಚು ಹರಿಸ್ತಿದ್ದಾರೆ. ಅಷ್ಟೇ ಅಲ್ಲ, ಶ್ರೀಕೃಷ್ಣನ ಆರಾಧಿಸುತ್ತಲೇನೇ ರಾಕ್​ಸ್ಟಾರ್ ರೇಮೊಗೆ ಗಾಳ ಹಾಕಿದ್ದಾರೆ. ಇಷ್ಟಕ್ಕೂ ಆಕೆಯ ಕಂಠ ಹೇಗಿದೆ..? ಮ್ಯೂಸಿಕಲ್ ಮೊಹಬ್ಬತ್ ಕಹಾನಿ ಏನು ಅಂತೀರಾ..? ನೀವೇ ಓದಿ.

  • ದಾಸರ ಕೀರ್ತನೆಗೆ ಕಮರ್ಷಿಯಲ್ ಟಚ್ ನೀಡಿರೋ ಜನ್ಯ
  • ರೇಮೊ ರಿಲೀಸ್​ಗೆ ದಿನಗಣನೆ.. ಇಶಾನ್ ತೆಕ್ಕೆಯಲ್ಲಿ ಬ್ಯೂಟಿ
  • ಇದು ಒಡೆಯರ್ ‘ಗೂಗ್ಲಿ’ ನೆನಪಿಸೋ ಪ್ರೇಮ ದೃಶ್ಯಕಾವ್ಯ..!

ಪವನ್ ಒಡೆಯರ್ ಅಂದಾಕ್ಷಣ ಥಟ್ ಅಂತ ನೆನಪಿಗೆ ಬರೋದೇ ಗೂಗ್ಲಿ. ಹೌದು.. ರಾಕಿಂಗ್ ಸ್ಟಾರ್ ಯಶ್ ಸಿನಿ ಕರಿಯರ್​ನ ಒನ್ ಆಫ್ ದಿ ಬಿಗ್ಗೆಸ್ಟ್ ಹಿಟ್ ಮೂವಿ ಅದು. ಅದಾದ ಬಳಿಕ ಗೂಗ್ಲಿ 2 ಅದ್ಯಾವಾಗ ಬರುತ್ತೋ ಅಂತ ಎಲ್ರೂ ಬಹಳ ಕಾತರರಾಗಿದ್ರು. ಆದ್ರೀಗ ಗೂಗ್ಲಿ 2 ಶೈಲಿಯಲ್ಲೇ ಒಡೆಯರ್ ಒಂದು ಸಿನಿಮಾನ ಕಟ್ಟಿಕೊಟ್ಟಿದ್ದಾರೆ. ಅದೇ ರೇಮೊ.

ಯೆಸ್.. ಸ್ಯಾಂಡಲ್​ವುಡ್​ನ ಮಿಲ್ಕಿಬಾಯ್ ಇಶಾನ್ ನಟನೆಯ ರೇಮೊ ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿ. ಪವನ್ ಒಡೆಯರ್ ಸಾರಥ್ಯದ ಈ ಚಿತ್ರದಲ್ಲಿ ಇಶಾನ್ ಜೊತೆ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದು, ಆಕೆಯ ಕ್ಲಾಸಿಕಲ್ ಲುಕ್ಸ್ ಚಿತ್ರದ ಗಮ್ಮತ್ತು ಹೆಚ್ಚಿಸಿದೆ. ಇದೇ ನವೆಂಬರ್ 25ರಂದು ತೆರೆಗೆ ಬರೋಕೆ ಸಜ್ಜಾಗಿರೋ ಈ ಸಿನಿಮಾ, ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್​ನಿಂದ ನಿರೀಕ್ಷೆ ಡಬಲ್ ಮಾಡಿದೆ.

ಜಯಾಧಿತ್ಯ ಫಿಲಂಸ್ ಬ್ಯಾನರ್​ನಡಿ ಸಿಆರ್ ಮನೋಹರ್ ತನ್ನ ಕುಟುಂಬದ ಕುಡಿಗಾಗಿ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಚಿತ್ರದ ಮತ್ತೊಂದು ಕ್ಲಾಸಿಕ್ ಸಾಂಗ್ ಬಿಡುಗಡೆ ಆಗಿದ್ದು, ನೋಡುಗರ ಗಮನ ಸೆಳೆದಿದೆ. ಹೌದು.. ಇದು ಪುರಂದರ ದಾಸರ ಕೀರ್ತನೆಯಾಗಿದ್ದು, ಶ್ರೀಕೃಷ್ಣನ ಆರಾಧಿಸೋ ಈ ಹಾಡು ಚಿತ್ರದಲ್ಲಿ ಗಾಯಕಿ ಮೋಹನ ಹಾಡುವಂತಹ ಹಾಡಾಗಿದೆ. ಅರ್ಥಾತ್ ಆಶಿಕಾ ಕಂಠದಲ್ಲಿ ಮೂಡಿಬರೋ ಈ ಗೀತೆ ಸ್ಟೇಜ್​ನಲ್ಲಿ ಕೂತು ಹಾಡುವ ಪರಿಯಲ್ಲಿದೆ.

ದಾಸರ ಕೀರ್ತನೆಗೆ ಸಿನಿಮ್ಯಾಟಿಕ್ ಟಚ್ ನೀಡಿರೋ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವ್ರು, ಅದಕ್ಕೆ ಇಂದು ನಾಗರಾಜ್ ಗಾಯನದ ಮೂಲಕ ಹೊಸ ಆಯಾಮ ಕೊಟ್ಟಿದ್ದಾರೆ. ಇಂತಹ ಅರ್ಥಪೂರ್ಣ ಸಾಲುಗಳುಳ್ಳ ಕೀರ್ತನೆ, ಕಮರ್ಷಿಯಲ್ ಸಿನಿಮಾದಲ್ಲಿ ಮೂಡಿಬಂದಿರೋದು, ದೊಡ್ಡ ಮಟ್ಟದಲ್ಲಿ ಜನಕ್ಕೆ ತಲುಪುವಂತಾಗಿದೆ.

ಅಂದಹಾಗೆ ರೇಮೋ ಚಿತ್ರದಲ್ಲಿ ಇಶಾನ್ ರಾಕ್​ಸ್ಟಾರ್ ರೇವಂತ್ ಹಾಗೂ ರೇಮೊ ಆಗಿ ಎರಡು ಡಿಫರೆಂಟ್ ಶೇಡ್​ಗಳಲ್ಲಿ ಕಾಣಸಿಗಲಿದ್ದಾರೆ. ಕ್ಲಾಸಿಕಲ್ ಸಿಂಗರ್ ಆಗಿ ಆಶಿಕಾ ಕಂಡರೆ, ಮಧುಬಾಲಾ, ಶರತ್ ಕುಮಾರ್ ಅಂತಹ ಹಿರಿಯ ಕಲಾವಿದರ ಸಾಥ್ ಕೂಡ ಈ ಚಿತ್ರಕ್ಕಿದೆ. ಒಟ್ಟಾರೆ ರೋಗ್ ಚಿತ್ರದಿಂದ ಬೆಳ್ಳಿತೆರೆಗೆ ಅಡಿಯಿಟ್ಟ ಇಶಾನ್​ಗೆ ಇದೊಂದು ಪಕ್ಕಾ ಲಾಂಚ್ ಪ್ಯಾಡ್ ಆಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES