Wednesday, January 22, 2025

ತ್ರಿಬಲ್ ರೈಡಿಂಗ್​ ಮ್ಯೂಸಿಕ್ ಮ್ಯಾಜಿಕ್.. ಗಣಿ ಪಕ್ಕಾ ಲಾಜಿಕ್

ಗಣಿ ಪಟಾಕಿ ಸಿನಿಮಾದಲ್ಲಿ ಬ್ಯಾಗ್ರೌಂಡ್ ಸ್ಕೋರ್ ಸಿಡಿಸಿದ್ದ ಟಾಲಿವುಡ್ ಟೆಕ್ನಷಿಯನ್ ತ್ರಿಬಲ್ ರೈಡಿಂಗ್ ಆಲ್ಬಂನ ಅಸಲಿ ಮಾಸ್ಟರ್. ಯೆಸ್.. ಹಾಡುಗಳಿಂದ ಸಿಕ್ಕಾಪಟ್ಟೆ ಹಂಗಾಮ ಮಾಡ್ತಿರೋ ಗೋಲ್ಡನ್ ಸ್ಟಾರ್ ಅಪ್​ಕಮಿಂಗ್ ಪ್ರಾಜೆಕ್ಟ್, ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಏನಿದರ ಅಸಲಿ ಗಮ್ಮತ್ತು ಅಂತೀರಾ..? ಈ ಸ್ಟೋರಿ ಓದಿ.

  • ಅಂದು ಪಟಾಕಿ ಸೌಂಡ್.. ಇಂದು ರೈಡಿಂಗ್ ಸಾಂಗ್ಸ್ ಬ್ಯಾಂಗ್
  • ನವೆಂಬರ್ 11ಕ್ಕೆ ಅಖಾಡಕ್ಕೆ ಇಳೀತಾರಾ ಗೋಲ್ಡನ್ ಸ್ಟಾರ್..?
  • ಗಾಳಿಪಟ ಸಕ್ಸಸ್ ಕಿಕ್.. ಮಹಿ, ರಾಮ್ ಗೋಪಾಲ್ ದಿಲ್​ಖುಷ್

ಯೆಸ್.. ಟೈಟಲ್​ಗೆ ತಕ್ಕನಾಗಿ ಮಳೆ ಹುಡ್ಗ ಗಣೇಶ್​ರ ತ್ರಿಬಲ್ ರೈಡಿಂಗ್ ಅತೀವ ನಿರೀಕ್ಷೆ ಮೂಡಿಸುತ್ತಿದೆ. ಕಾರಣ ಅದ್ರ ಮ್ಯೂಸಿಕಲ್ ಆಲ್ಬಂ. ಈ ಹಿಂದೆ ಇದೇ ಗಣೇಶ್​ರ ಪಟಾಕಿ ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಮಾಡಿದ್ದ ತೆಲುಗು ಟೆಕ್ನಿಷಿಯನ್ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಹಾಡುಗಳು ಒಂದಕ್ಕಿಂತ ಒಂದು ಕಲರ್​ಫುಲ್ ಅನಿಸಿವೆ.

ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಖ್ಯಾತ ಗಾಯಕಿ ಮಂಗ್ಲಿ ಜೊತೆ ಹಾಡಿದ್ದ ಯಟ್ಟ ಯಟ್ಟ ಡ್ಯಾನ್ಸಿಂಗ್ ನಂಬರ್ ಎಲ್ಲೆಡೆ ಗುನುಗುವಂತಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದ ಮೂವರು ಗ್ಲಾಮರ್ ಡಾಲ್​ಗಳ ಜೊತೆ ಸ್ಟೆಪ್ ಹಾಕಿರೋ ಈ ಸಾಂಗ್ ಸಿನಿಮಾಗೆ ಟ್ರಂಪ್ ಕಾರ್ಡ್​ ಆಗಿ ಪರಿಣಮಿಸಿದೆ. ಅದ್ರಲ್ಲೂ ಜೈ ಆನಂದ್ ಸಿನಿಮಾಟೋಗ್ರಫಿ, ಮುರಳಿ ಮಾಸ್ಟರ್ ಕೊರಿಯೋಗ್ರಫಿ, ಕಲರ್​ಫುಲ್ ಸೆಟ್ ಎಲ್ಲವೂ ಹಾಡಿನ ಗಮ್ಮತ್ತು ಹೆಚ್ಚಿಸಿವೆ.

ನಂತರ ಬಂದಂತಹ ನಿಜವೇ ಅಥವಾ ಇದು ಕನಸೇ ಅನ್ನೋ ಮೆಲೋಡಿ ಸಾಂಗ್ ಕೂಡ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಸೋನು ನಿಗಮ್ ಹಾಗೂ ಸರಸ್ ಚಂದ್ರಿಕಾ ಗಾಯನದ ಈ ಹಾಡಿಗೆ ಜಯಂತ್ ಕಾಯ್ಕಿಣಿ ಪದಪುಂಜ ಪೋಣಿಸಿದ್ದು, ಎರಡನೇ ಸಾಂಗ್ ಕೂಡ ಕಲರ್​ಫುಲ್ ಆಗಿ ಕಟ್ಟಿಕೊಟ್ಟಿದೆ ಚಿತ್ರತಂಡ.

ಗಾಳಿಪಟ ಸಕ್ಸಸ್ ನಂತ್ರ ಗಣಿಯ ಈ ಸಿನಿಮಾ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಅನುಭವಿ ನಿರ್ದೇಶಕ ಮಹೇಶ್ ಗೌಡ ಇದಕ್ಕೆ ಌಕ್ಷನ್ ಕಟ್ ಹೇಳಿದ್ದು, ರಾಮ್ ಗೋಪಾಲ್ ಅವ್ರು ತ್ರಿಬಲ್ ರೈಡಿಂಗ್​ನಿಂದ ನಿರ್ಮಾಪಕರಾಗಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡ್ತಿದ್ದಾರೆ. ಕೃಪಾಲು ಎಂಟರ್​ಟೈನ್ಮೆಂಟ್ಸ್ ಬ್ಯಾನರ್​ನ ಈ ಚಿತ್ರ ನವೆಂಬರ್ 11ಕ್ಕೆ ತೆರೆಗೆ ಬರೋ ಮುನ್ಸೂಚನೆ ನೀಡಿದೆ.

ಗೋಲ್ಡನ್ ಸ್ಟಾರ್ ಅಂದ್ಮೇಲೆ ಅಲ್ಲಿ ನಾನ್​ಸ್ಟಾಪ್ ಫನ್, ಲವ್, ರೊಮ್ಯಾನ್ಸ್, ಕಣ್ಮನ ತಣಿಸೋ ಸಾಂಗ್ಸ್ ಇದ್ದೇ ಇರುತ್ತೆ. ಈ ಸಿನಿಮಾ ಕೂಡ ಅಂಥದ್ದೇ ಕಂಟೆಂಟ್​ನಿಂದ ಪ್ರೇಕ್ಷಕರನ್ನ ರಂಜಿಸಲಿದೆ. ಗಣಿಗೆ ಅದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ,ರಂಗಾಯಣ ರಘು, ಅಚ್ಯುತ್ ಕುಮಾರ್, ಶೋಭರಾಜ್, ಕುರಿ ಪ್ರತಾಪ್, ಅರವಿಂದ ಬೋಳಾರ್, ರವಿಶಂಕರ್ ಗೌಡ, ಚಿತ್ಕಲ ಬಿರಾದಾರ್, ರೇಣುಕಾ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES