Friday, April 26, 2024

ಮತ್ತೆ ಕನ್ನಡಕ್ಕೆ ಸಂಜಯ್ ದತ್.. ಧ್ರುವಗೆ ಇವ್ರೇ ವಿಲನ್..!

ಆ್ಯಕ್ಷನ್​ ಪ್ರಿನ್ಸ್ ಸಿನಿಮಾಗಳಿಲ್ಲದೆ​ ಅಭಿಮಾನಿಗಳೆಲ್ಲ ಸಖತ್​ ನಿರಾಸೆಯಾಗಿರೋದ್ ಎಲ್ರಿಗೂ​ ಗೊತ್ತಿರೋ ವಿಚಾರ. ಮಾರ್ಟಿನ್​ ಲೇಟ್​ ಆದ್ರೂ ಲೆಟೆಸ್ಟ್​ ಎಂಟ್ರಿ ಕೊಡೋ ಪ್ಲಾನ್​​​ನಲ್ಲಿದೆ. ಇದಾದ ನಂತ್ರ ಜೋಗಿ ಪ್ರೇಮ್,​​​ ಧ್ರುವ ಸರ್ಜಾಗೆ ಗಾಳ ಹಾಕಿದ್ದಾರೆ. ಇವರಿಬ್ರ ಕಾಂಬೋದಲ್ಲಿ ಭರ್ಜರಿಯಾಗಿ ಪ್ಯಾನ್​ ಇಂಡಿಯಾ ಸಿನಿಮಾ ಸೆಟ್ಟೇರಲಿದೆ. ಅದೇನೆ ಇರಲಿ ಈ ಸಿನಿಮಾದ ವಿಲನ್​ ಹೆಸ್ರು ಕೇಳಿದ್ರೆ ಮತ್ತೊಮ್ಮೆ ಶಾಕ್​ ಆಗ್ತಿರಾ. ಯೆಸ್​​​.. ಯಾರು ಆ ಖಡಕ್​ ವಿಲನ್​​..? ನೀವೇ ಓದಿ.

  • ಅಧೀರ V/S ಮಾರ್ಟಿನ್​​ ತೆರೆಯ ಮೇಲೆ ರಕ್ಕಸ ಕಾಳಗ

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿನಯದ ಮಾರ್ಟಿನ್​ ಶೂಟಿಂಗ್​ಗೆ​ ಬ್ರೇಕ್​​ ಬಿದ್ದಿತ್ತು. ಧ್ರುವ ಸರ್ಜಾ ಅಜ್ಜಿ ಸಾವಿನಿಂದ  ಸಿನಿಮಾ ಶೂಟಿಂಗ್​ ಡಿಲೇ ಆಯ್ತು. ಹಾಗಾಗಿ ಬಾಕಿ ಉಳಿದಿದ್ದ ಭಯಾನಕ ಕ್ಲೈಮ್ಯಾಕ್ಸ್​ ಫೈಟ್ ಸೀನ್​ಗಳನ್ನು ಕಾಳಜಿ ವಹಿಸಿ ಶೂಟ್​ ಮಾಡಲಾಗ್ತಿದೆ. ರವಿವರ್ಮಾ ಮಾಸ್ಟರ್​ ಮೈಂಡ್​ನಲ್ಲಿ ಅದ್ದೂರಿ ಸ್ಟಂಟ್​​​ಗಳೊಂದಿಗೆ ಆ್ಯಕ್ಷನ್​ ಸೀಕ್ವೆನ್ಸ್​ಗಳು ಇರಲಿವೆ. ಈ ಸಿನಿಮಾ ನಂತ್ರ ಮಾರ್ಟಿನ್​​ಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಜೋಗಿ ಪ್ರೇಮ್​​.

ಯೆಸ್​​.. ಈಗಾಗ್ಲೇ ಜೋಗಿ ಪ್ರೇಮ್​ ಜತೆ ಧ್ರುವ ಸರ್ಜಾ ನಟಿಸೋದಾಗಿ ಕನ್ಫರ್ಮ್​ ಮಾಡಿದ್ದಾರೆ. ಮುಹೂರ್ತ ಮುಗಿಸಿ ಪ್ರೀ ಪ್ರೊಡಕ್ಷನ್​​ ತಯಾರಿಯಲ್ಲಿರೋ ಚಿತ್ರತಂಡ ಭರ್ಜರಿ ಪ್ಲಾನ್​​ ಕೂಡ ಮಾಡಿಕೊಂಡಿದೆ. ಗಾಂಧಿನಗರದಲ್ಲಿ ಬೆಂಕಿಬಿರುಗಾಳಿಯಂತ ಸುದ್ದಿಯೊಂದು ಹರಿದಾಡ್ತಿದೆ. ಮತ್ತೆ ಸ್ಯಾಂಡಲ್​ವುಡ್​ಗೆ ಅಧೀರನ ಎಂಟ್ರಿ ಆಗಲಿದೆ. ಧ್ರುವ ಸರ್ಜಾ ಸಿನಿಮಾದಲ್ಲಿ ಟಫ್​ ವಿಲನ್​ ರೋಲ್​ನಲ್ಲಿ ಸಂಜಯ್​ ದತ್​ ಕಣಕ್ಕಿಳಿಯಲಿದ್ದಾರೆ.

  • ಅಧೀರನ ರಗಡ್​ ಲುಕ್​ ನೋಡೋಕೆ ಫ್ಯಾನ್ಸ್​ ವೆಯ್ಟಿಂಗ್​
  • ಕೆಜಿಎಫ್​​ ನಂತ್ರ ಸಂಜುಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​​​

ಕೆಜಿಎಫ್​​ ಸಿನಿಮಾದ ಅಧೀರನ ಪಾತ್ರ ಮರೆಯೋಕೆ ಸಾಧ್ಯವಿಲ್ಲ. ಚಾಪ್ಟರ್​ 1 ರಲ್ಲಿ ಸ್ಕ್ರೀನ್​ ಮೇಲೆ ಕಾಣಿಸದೇ ಇದ್ರು, ಪ್ರೇಕ್ಷಕರ ಎದೆಯಲ್ಲಿ ಢವ ಢವ ಫೀಲ್​​​ ಕೊಟ್ಟ ನಟ ಸಂಜಯ್​. ಇನ್ನೂ ಕೆಜಿಎಫ್​ ಸೀಕ್ವೆನ್ಸ್​ನಲ್ಲಿ ಅಧೀರದ ರಕ್ಕಸ ಕಾಳಗ ಕಂಡು ಫ್ಯಾನ್ಸ್​​ ಅಕ್ಷರಶಃ ಥ್ರಿಲ್​ ಆಗಿದ್ರು. ಅಧೀರನ ಎಂಟ್ರಿ, ಡೈಲಾಗ್​​​​​, ಲುಕ್​​​​ ಕಂಡು ಬೆಚ್ಚಿ ಬಿದ್ದಿದ್ರು. ಇದೀಗ ಅಧೀರ ಮತ್ತೆ ಕನ್ನಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೋಗಿ ಪ್ರೇಮ್​ ಕೂಡ ಅವರನ್ನು ಡಿಫರೆಂಟ್​​ ಆಗಿ ತೋರಿಸೋಕೆ ಸ್ಕ್ರೀಪ್ಟ್​ ರೈಟ್​ ಮಾಡ್ತಿದ್ದಾರೆ.

ಕೆಜಿಎಫ್​ ಆದ್ಮೇಲೆ ಸಂಜಯ್​ ದತ್​ ಮಾರ್ಕೆಟ್​ ಚೇಂಜ್​ ಆಗಿದೆ. ವಿಶ್ವ ಮೆಚ್ಚಿದ ಸಿನಿಮಾದಿಂದ ಸಂಜು ಲಕ್​ ಕೂಡ ಚೇಂಜ್​ ಆಗಿದೆ. ಪರಭಾಷೆಗಳಿಂದ ಸಿಕ್ಕಾಪಟ್ಟೆ ಆಫರ್ಸ್​ ಕೂಡ ಬರ್ತಿವೆ. ಪ್ರೇಮ್​​​ ಅದ್ದೂರಿ ಸಿನಿಮಾದಲ್ಲಿ ಸಂಜಯ್​ ದತ್​​ ಎಂಟ್ರಿಯಾದ್ರೆ, ಸಿನಿಮಾದ ತಾಕತ್ತು ದುಪ್ಪಟ್ಟಾಗಲಿದೆ.

ಜೋಗಿ ಪ್ರೇಮ್​ ಕನ್ನಡ ಚಿತ್ರರಂಗ ಕಂಡ ಫ್ಯಾಷನೇಟ್​​ ನಿರ್ದೇಶಕ. ಕಥೆಯ ಆಯ್ಕೆಯಲ್ಲೂ ಸಖತ್​ ಚ್ಯುಸಿಯಾಗಿರೋ ಪ್ರೇಮ್​​​, ಧ್ರುವ ಸರ್ಜಾರನ್ನು ಯಾವ ರೀತಿ ತೆರೆಯ ಮೇಲೆ ತೋರಿಸ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ರಿಗೂ ಇದೆ. ಜತೆಗೆ ಧ್ರುವ ಸರ್ಜಾ ಜತೆ ಸಂಜಯ್​ ದತ್ ಜಟಾಪಟಿ ನೋಡೋಕೆ ಫ್ಯಾನ್ಸ್​ ಕೂಡ ಕಾತರರಾಗಿದ್ದಾರೆ.  1970 ರ ಕಾಲಘಟ್ಟದ ಕಥೆಯಲ್ಲಿ ಇವರಿಬ್ರ ಕ್ಯಾರೆಕ್ಟರ್​ ಯಾವ ರೀತಿ ಇರುತ್ತೋ ಕಾದು ನೊಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES