Saturday, April 27, 2024

ಮಾಜಿ ಸಿಎಂ ಯಡಿಯೂರಪ್ಪ’ಗೆ ಸಂಕಷ್ಟ; ಇದು ಪವರ್​ ಟಿವಿಯ ಬಿಗ್ ಇಂಪ್ಯಾಕ್ಟ್​

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆಯಲ್ಲಿ ತಮ್ಮ ಸ್ಥಾನದ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಸಲ್ಲಿಸಿದ ಕ್ರಿಮಿನಲ್​ ಮನವಿಗೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರು ಭಾಗಶಃ ಪುರಸ್ಕರಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ.

ಯಡಿಯೂರಪ್ಪ ಅವರ ಲಂಚದ ಕುರಿತು 2021ರ ಜುಲೈ 8ರಂದು ಖಾಸಗಿ ದೂರನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿಲಾಗಿತ್ತು. ಪವರ್ ಟಿವಿ ವರದಿ ಆಧರಿಸಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಬಿಡಿಎ ಮೂಲಕ ಯೋಜನೆ ನೀಡಲು ಆಗಿನ ಸಿಎಂ ಬಿಎಸ್​ವೈಗೆ ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿಯಿಂದ 12.5 ಕೋಟಿ ರೂಪಾಯಿ ಲಂಚ ಪಡೆದ ಆರೋಪವಿತ್ತು. ಇದ್ರಲ್ಲಿ 9 ಜನರಲ್ಲಿ ಬಿ.ಎಸ್ ಯಡಿಯೂರಪ್ಪ, ಎಸ್​ಟಿ ಸೋಮಶೇಖರ್​, ಬಿವೈ ವಿಜಯೇಂದ್ರ ಸೇರಿದಂತೆ ಇನ್ನೀತರರ ವಿರುದ್ಧ ವಿಚಾರಣೆ ನಡೆಸುವಂತೆ ಪವರ್​ ಟಿವಿ ಆಧರಿಸಿ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಕ್ರಿಮಿನಲ್​ ಮನವಿ ಅರ್ಜಿಯನ್ನ ಸಲ್ಲಿಸಿದ್ದರು. ಈ ಮನವಿಯನ್ನ ನ್ಯಾಯಾಧೀಶ ಎಸ್.ಸುನೀಲ್ ದತ್ ಯಾದವ್ ಹೈಕೋರ್ಟ್​ ಎತ್ತಿ ಹಿಡಿದಿದ್ದು, ಈ ಮೂಲಕ ಪವರ್​ ಟಿವಿಗೆ ಜಯ ಸಂದಿದೆ.

ಬಿಎಸ್​ವೈ ಕುಟುಂಬದ ಲಂಚಾವತಾರ ಕುರಿತು ವಿಸ್ತೃತವಾಗಿ ಪವರ್​ ಟಿವಿ ವರದಿ ಪ್ರಸಾರ ಮಾಡಿತ್ತು. ರಾಮಲಿಂಗಂ ಕನ್​ಸ್ಟ್ರಕ್ಷನ್​​​​​​​​​ನಿಂದ ಬಿಎಸ್​​ವೈ ಕುಟುಂಬಕ್ಕೆ ಲಂಚ ಬಗ್ಗೆ ದಾಖಲೆ ಸಮೇತವಾಗಿ ಬ್ಯಾಂಕ್​ ವ್ಯವಹಾರ, ವಾಟ್ಸಾಪ್ ಚಾಟ್​​ ಬಗ್ಗೆ ಪವರ್​ ಟಿವಿ ಬಿಚ್ಚಿಟ್ಟಿತ್ತು.

ರಾಮಲಿಂಗಂ ಕಂಪನಿ ಹಾಗೂ ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ ನಡುವಿನ ವಾಟ್ಸಾಪ್ ನಲ್ಲಿ ಈ ಲಂಚ ಬಗ್ಗೆ ಚಾಟ್​ ಮೂಲಕ ಡೀಲ್​ ಮಾಡಲಾಗಿತ್ತು. ಈ ಕುರಿತು ವರದಿ ಮಾಡಿದ್ದ ಪವರ್ ಟಿವಿಯ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು.

RELATED ARTICLES

Related Articles

TRENDING ARTICLES