Sunday, January 12, 2025

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂದ್ರೆ ಕೊಡುತ್ತೇನೆ: ಸಚಿವ ಮಾಧುಸ್ವಾಮಿ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕರೆ ಮಾಡಿ ಆಡಿಯೋ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಡಿಯೋ ನಂದೇ ಎಂದು ಒಪ್ಪಿಕೊಂಡಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ವೈರಲ್ ಆದ ವಿಡಿಯೋ ಹಳೆಯದು. ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಗೆ ಕಮಿಷನ್ ವ್ಯವಹಾರ ನಾನೆ ಖುದ್ದು ತಿಳಿಸಿದ್ದೆ ಆದರೆ ಕ್ರಮನೇ ಆಗಿಲ್ಲ ಎಂದರು.

ಈಗ ನನ್ನ ಬಗ್ಗೆ ಸೋಮಶೇಖರ್, ಮುನಿರತ್ನ ಮಾತಾಡ್ತಾರೆ. ನೀವು ಏನು ಹೇಳ್ತೀರ ಹಾಗೆ ಮಾಡ್ತೀನಿ. ನಾನು ಸಚಿವ ಸ್ಥಾನದ ಕುರ್ಚಿಗೆ ಅಂಟಿಕೊಂಡಿಲ್ಲ. ರಾಜೀನಾಮೆ ಕೊಡಿ ಅಂದ್ರೆ ಕೊಡ್ತೀನಿ. ರಾಜೀನಾಮೆ ಕೊಡೋದಾಗಿ ಸಿಎಂಗೆ ನೇರವಾಗಿ ಮಾಧುಸ್ವಾಮಿ ಹೇಳಿದ್ದಾರೆ.‘

ರಾಜೀನಾಮೆ ಎನ್ನುತ್ತಿದ್ದಂತೆ ಮಾಧುಸ್ವಾಮಿ ರಾಜೀನಾಮೆ ಮಾತಿಂದ ಸಿಎಂ ಬೆಚ್ಚಿಬಿದ್ದಾರೆ. ಕೊನೆಗೆ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ. ರಾಜೀನಾಮೆ ಬಗ್ಗೆ ಮಾತನಾಡಬೇಡಿ. ಡಿಸಿಸಿ ಬ್ಯಾಂಕ್ ಕಮಿಷನ್ ವ್ಯವಹಾರ ತನಿಖೆಗೆ ಸೂಚಿಸ್ತೇನೆ. ನಿಮ್ಮ ಹೇಳಿಕೆ ಬಗ್ಗೆ ಯಾರೂ ಪ್ರತಿಕ್ರಿಯಿದಂತೆ ನೋಡಿಕೊಳ್ತೇನೆ ಎಂದು ಸಿಎಂ ಸಮಾಧಾನ ಮಾಡಿದ್ದಾರೆ.

ಈ ಆಡಿಯೋದಲ್ಲಿ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಅವರು ಮಾಧುಸ್ವಾಮಿ ಜತೆ ಮಾತನಾಡಿ, ಗ್ರಾಮೀಣ ಸೊಸೈಟಿ ಮಟ್ಟದಲ್ಲಿ ಸಾಲ ನೀಡುವಾಗ ಕಮೀಷನ್ ಪಡೆಯುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎನ್ನುತ್ತಾರೆ. ಆಗ ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ. ಇನ್ನೆಂಟು ತಿಂಗಳು ಇದೆ ಹೀಗಾಗಿ ಸುಮ್ಮನಿದ್ದೇವೆ. ನಾನು ಸಹ ಕಮೀಷನ್ ನೀಡಿದ್ದೇನೆ ಎಂದಿದ್ದರು.

RELATED ARTICLES

Related Articles

TRENDING ARTICLES