ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಮತ್ತೆ ಎಂಟು ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ನಗರದ ಶ್ರೀ ಶರಣ ಬಸವೇಶ್ವರ ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್ ಕಾಲೇಜು, ಗೋದುತಾಯಿ ಮಹಿಳಾ ಕಾಲೇಜು, ಎಮ್‌ಎಸ್ ಇರಾನಿ ಆರ್ಟ್ಸ್ & ಸೈನ್ಸ್ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಇನ್ನೂ ಬಂಧಿತ ಎಂಟು ಜನ ಆರೋಪಿಗಳ ವಿರುದ್ಧ ನಗರದ ಅಶೋಕ ನಗರ, ಸ್ಟೇಷನ್ ಬಜಾರ್ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು.
ಇನ್ನೂ ಬಂಧಿತ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಡಿ ನೇಮಕಾತಿಯಾಗಿದ್ದರಲ್ಲದೇ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಇವರೆಲ್ಲರ ಹೆಸರಿತ್ತು ಅಂತಾ ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.. ಇನ್ನು ಆರೋಪಿಗಳು ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಬಳಿ ಹೋಗಿದ್ದರು. ಅದರಂತೆ ಆರ್‌ಡಿ ಪಾಟೀಲ್ ಬಳಿ ಲಕ್ಷ ಲಕ್ಷ ರೂಪಾಯಿ ಡೀಲ್ ಮಾಡಿಕೊಂಡು ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಇನ್ನು ಬಂಧಿತ ಎಂಟು ಜನ ಆರೋಪಿಗಳು ಅಫಜಲಪುರ ಮತ್ತು ಜೇವರ್ಗಿ ತಾಲೂಕಿನ ಮೂಲದವರಾಗಿದ್ದು, ಆರೋಪಿಗಳಿಗೆ ಸಿಐಡಿ ಅಧಿಕಾರಿಗಳು ಫುಲ್ ಡ್ರಿಲ್ ನಡೆಸುತ್ತಿದ್ದಾರೆ.
ಅದೇನೇ ಇರಲಿ ಎಸ್‌ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಪಿಎಸ್‌ಐ ಪರೀಕ್ಷಾ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಈ ಅಕ್ರಮಕ್ಕೆ ಸಾಥ್ ನೀಡಿರುವ ಇನ್ನಷ್ಟು ಜನ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕಿಯರು ಹಾಗೂ ಅಕ್ರಮಕ್ಕೆ ಸಹಕಾರ ನೀಡಿರುವವರು ಸಹ ಹಗರಣದಲ್ಲಿ ಲಾಕ್ ಆಗುವ ಸಾಧ್ಯತೆಯಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ