Friday, November 22, 2024

ಹರಿಕಥೆ ಅಲ್ಲ ಗಿರಿಕಥೆಗೆ ಪವರ್ ಟಿವಿ ರೇಟಿಂಗ್: 3.5/5

ಸಿನಿಮಾದಿಂದ ಸಿನಿಮಾಗಾಗಿ ಸಿನಿಮಾದವರಿಗೋಸ್ಕರ, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಅನ್ನೋ ವಿನೂತನ ಕಥೆಯನ್ನ ಹೊತ್ತು ಬಂದಿದ್ದಾರೆ. ಸಾವಿರ ಸಿನಿಮಾಗಳ ಸರದಾರ ಹೊನ್ನವಳ್ಳಿ ಕೃಷ್ಣ ಜೊತೆ ಬೆಟ್ಟದಷ್ಟು ಸಿನಿಮಾ ಕನಸು ಹೊತ್ತ ಮಗ, ಆತನ ಸುತ್ತೋ ಕಥೆಗೆ ಎಲ್ರೂ ಫಿದಾ ಆಗಿದ್ದಾರೆ. ಇಷ್ಟಕ್ಕೂ ಸಿನಿಮಾ ಹೇಗಿದೆ..? ಪ್ರೇಕ್ಷಕ ಏನಂದ..? ಸಿನಿಮಾ ರೇಟಿಂಗ್ ಎಷ್ಟು ಅಂತೀರಾ..? ಈ ರಿಪೋರ್ಟ್​ ನೋಡಿ.

ರಿಷಬ್​ರ ಗಿರಿ ಕಥೆ ಕೇಳಿ ಓ ಮೈ ಗಾಡ್ ಎಂದ ಪ್ರೇಕ್ಷಕಪ್ರಭು

ಇದು ಸಿನಿಮಾದವ್ರ ಸಿನಿಮೋತ್ಸಾಹದ ಕಥೆ ಹಾಗೂ ವ್ಯಥೆ

ಕೊರೋನಾ ಬಳಿಕ ಹೀರೋ, ಗರುಡ ಗಮನ ವೃಷಭ ವಾಹನ ಸಿನಿಮಾಗಳಿಂದ ಫ್ರೆಶ್ ಫೀಲ್ ಕೊಟ್ಟ ರಿಷಬ್ ಶೆಟ್ಟಿ ಹಾಗೂ ಟೀಂ ಇದೀಗ ಹರಿಕಥೆ ಅಲ್ಲ ಗಿರಿಕಥೆ ಅನ್ನೋ ಹೊಚ್ಚ ಹೊಸ ಸಿನಿಮಾದಿಂದ ಮಸ್ತ್ ಮನರಂಜನೆ ನೀಡ್ತಿದೆ. ಕಾರಣ ಇದು ಬರೀ ಸಿನಿಮಾ ಅಲ್ಲ, ಸಿನಿಮಾದವ್ರ ಕಥೆ. ಸಿನಿಮೋತ್ಸಾಹಿಗಳ ಎಮೋಷನ್.

ಕರಣ್ ಹಾಗೂ ಅನಿರುದ್ದ್ ಜಂಟಿ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಅದ್ರಲ್ಲೂ ಸದಾ ಹೊಸತನಕ್ಕೆ ಹಾತೊರೆಯೋ ಶೆಟ್ರ ಟೀಂ, ಈ ಬಾರಿಯೂ ಹೊಸ ಪ್ಯಾಟ್ರನ್ ಕಥೆಯನ್ನ ಉಣಬಡಿಸೋದರಲ್ಲಿ ಯಶಸ್ವಿಯಾಗಿದೆ.

ಹರಿಕಥೆ ಅಲ್ಲ ಗಿರಿಕಥೆಯ ಸ್ಟೋರಿಲೈನ್ :

ಸಾವಿರ ಸಿನಿಮಾಗಳ ಸರದಾರ ಹೊನ್ನವಳ್ಳಿ ಕೃಷ್ಣ ಅವ್ರ ಮಗ ಗಿರಿ ಡೈರೆಕ್ಟರ್ ಆಗಲು ಬೆಂಗಳೂರಿಗೆ ಹೊರಡುತ್ತಾರೆ. ಆದ್ರೆ ಪ್ರೊಡ್ಯೂಸರ್​ನ ಹಿಡಿಯೋಕೆ ಅವ್ರು ಸಾಕಷ್ಟು ಹೆಣಗಾಡ್ತಾರೆ. ಕೊನೆಗೆ ಮೈಸೂರಿನಲ್ಲಿ ಅಪ್ಪನ ರೆಫರೆನ್ಸ್​​ನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ರೂಂ ಸೇರ್ತಾರೆ. ನಿರ್ಮಾಪಕರನ್ನ ಕ್ಯಾಚ್ ಹಾಕಲು ಎಂಎಲ್​ಎ ಮಗಳನ್ನೇ ಕ್ಯಾಚ್ ಹಾಕೋಕೆ ಹೋಗ್ತಾರೆ ಗಿರಿ. ಅದು ಸಫಲವಾಗದ ಹಿನ್ನೆಲೆ ಬ್ಯಾಂಕ್​ನಲ್ಲಿ ಲೋನ್ ಪಡೆಯಲು ಹೋಗಿ ಮತ್ತೊಂದು ಪೊಲೀಸ್ ಖಾಕಿ ವ್ಯೂಹದಲ್ಲಿ ಸಿಲುಕಿಕೊಳ್ತಾರೆ. ಅದ್ರಿಂದ ಹೊರಗೆ ಬರ್ತಾರಾ ಇಲ್ವಾ..? ಎಂಎಲ್​ಎ ಹಾಗೂ ಅವ್ರ ಮಗಳ ಸಹಾಯದಿಂದ ಸಿನಿಮಾ ಮಾಡ್ತಾರಾ ಇಲ್ವಾ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ.

ಹರಿಕಥೆ ಅಲ್ಲ ಗಿರಿಕಥೆ ಆರ್ಟಿಸ್ಟ್ ಪರ್ಫಾಮೆನ್ಸ್ :

ನಿಜಜೀವನದಲ್ಲೂ ಸಾವಿರ ಸಿನಿಮಾಗಳಲ್ಲಿ ನಟಿಸಿರೋ ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ, ಈ ಚಿತ್ರದಲ್ಲಿ ಹಿರಿಯ ಕಲಾವಿದನಾಗಿ, ಮಗ ಡೈರೆಕ್ಟರ್ ಆಗೋದನ್ನ ನೋಡೋಕೆ ಕಾಯ್ತಿದ್ದ ಹಿರಿಜೀವವಾಗಿ ಮನೋಜ್ಞ ಅಭಿನಯ ನೀಡಿದ್ದಾರೆ.

ಹೊನ್ನವಳ್ಳಿ ಕೃಷ್ಣ ಮಗ ಗಿರಿ ರೋಲ್​ನಲ್ಲಿ ರಿಷಬ್ ಶೆಟ್ಟಿ, ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ರಿಯಲ್ ಲೈಫ್​ನಲ್ಲಿ ನಿದ್ದೆಯಲ್ಲೂ ಸಿನಿಮಾವನ್ನೇ ಕನಸು ಕಾಣೋ ಕನಸುಗಾರ ರಿಷಬ್, ಚಿತ್ರರಂಗಕ್ಕೆ ಒಳ್ಳೆಯ ನಟ ಅಥ್ವಾ ತಂತ್ರಜ್ಞನಾಗಲು ಬೆಟ್ಟದಷ್ಟು ಆಸೆ ಆಕಾಂಕ್ಷೆಗಳನ್ನ ಹೊತ್ತು ಬರೋ ಸಾವಿರಾರು ಕನಸುಗಾರರನ್ನ ಪ್ರತಿನಿಧಿಸಿದ್ದಾರೆ. ಡೈರೆಕ್ಟರ್ ಆಗೋಕೆ ಆತ ಪಡೋ ಪಡಿಪಾಟಲು ಅಷ್ಟಿಷ್ಟಲ್ಲ. ಅವಮಾನ, ಅಪಮಾನಗಳ ಜೊತೆ ಅಸಹಾಯಕತೆ ಏನೆಲ್ಲಾ ಮಾಡಿಸುತ್ತೆ ಅನ್ನೋದನ್ನ ಹಾಸ್ಯದ ಜೊತೆ ಭಾವನಾತ್ಮಕವಾಗಿ ಹೇಳೋದ್ರಲ್ಲಿ ಶಿಳ್ಳೆ ಚಪ್ಪಾಳೆ ಗಿಟ್ಟಿಸ್ತಾರೆ.

ತಪಸ್ವಿನಿ ಹಾಗೂ ರಚನಾ ನಾಯಕಿಯರ ಪಾತ್ರಗಳನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಬ್ಬರಿಗೂ ಇದು ಚೊಚ್ಚಲ ಫುಲ್ ಪ್ಲೆಡ್ಜ್ ಮೂವಿ. ಆದ್ರೆ ಇಬ್ಬರ ಅಭಿನಯದಲ್ಲೂ ಪಕ್ವತೆ ಎದ್ದು ಕಾಣುತ್ತೆ. ಇನ್ನು ಇವ್ರ ಹೊರತು ಪಡಿಸಿ, ಖಾಕಿ ಖದರ್​ನಲ್ಲಿ ಪ್ರಮೋದ್ ಶೆಟ್ಟಿ ಎಂದಿನಂತೆ ಅಬ್ಬರಿಸಿದ್ದಾರೆ. ಕಿರಿಕ್ ಪಾರ್ಟಿಯ ಸಲ್ಮಾನ್ ಕೂಡ ನೆನಪಲ್ಲಿ ಉಳಿಯೋ ಗ್ಯಾರೇಜ್ ಹುಡ್ಗನಾಗಿ ಕಾಡಲಿದ್ದಾರೆ.

ಹರಿಕಥೆ ಅಲ್ಲ ಗಿರಿಕಥೆ ಪ್ಲಸ್ ಪಾಯಿಂಟ್ಸ್

  • ಕಥೆ, ಚಿತ್ರಕಥೆ & ನಿರೂಪಣೆ
  • ರಿಷಬ್ ಶೆಟ್ಟಿಯ ನೈಜ ಅಭಿನಯ
  • ಮಜಭೂತಾದ ಸಂಭಾಷಣೆ
  • ವಾಸುಕಿ ವೈಭವ್ ಸಂಗೀತ
  • ತಪಸ್ವಿನಿ, ರಚನಾರ ಪರಿಪಕ್ವ ನಟನೆ
  • ಹೊನ್ನವಳ್ಳಿ ಕೃಷ್ಣ- ರಿಷಬ್ ತಂದೆ-ಮಗನ ಬಾಂಧವ್ಯ

ಹರಿಕಥೆ ಅಲ್ಲ ಗಿರಿಕಥೆ ಮೈನಸ್ ಪಾಯಿಂಟ್ಸ್ :

ದ್ವಿತಿಯಾರ್ಧ ಕೊಂಚ ಲ್ಯಾಗ್ ಅನಿಸಲಿದೆ. ಆದ್ರೆ ಹಾಸ್ಯದ ಜೊತೆ ಜೊತೆಗೆ ಎಮೋಷನಲ್ ಜರ್ನಿ ಸಿನಿಮಾದುದ್ದಕ್ಕೂ ಸಾಗಲಿದೆ. ನಾರ್ಮಲ್ ಜಾನರ್ ಸಿನಿಮಾಗಳಿಗಿಂತ ಡಿಫರೆಂಟ್ ಆಗಿರೋ ಈ ಚಿತ್ರ ನೋಡುಗರಿಗೆ ಹೊಸ ಫೀಲ್ ಕೊಡೋದ್ರಲ್ಲಿ ಡೌಟೇ ಇಲ್ಲ.

ಹರಿಕಥೆ ಅಲ್ಲ ಗಿರಿಕಥೆಗೆ ಪವರ್ ಟಿವಿ ರೇಟಿಂಗ್: 3.5/5

ಹರಿಕಥೆ ಅಲ್ಲ ಗಿರಿಕಥೆ ಫೈನಲ್ ಸ್ಟೇಟ್​ಮೆಂಟ್ :

ಕ್ರಿಯೇಟೀವ್ ಟ್ಯಾಲೆಂಟ್ಸ್​ ಮಾತ್ರ ವಿಭಿನ್ನ ಬಗೆಯ ಸಿನಿಮಾಗಳನ್ನ ಮಾಡಲು ಸಾಧ್ಯ ಅನ್ನೋದು ಹರಿಕಥೆ ಅಲ್ಲ ಗಿರಿಕಥೆ ಚಿತ್ರದಿಂದ ಮತ್ತೊಮ್ಮೆ ಪ್ರೂವ್ ಆಗಿದೆ. ಇದು ಸಿನಿಮಾದಲ್ಲಿರೋ ಸಿನಿಮಾ ಮಂದಿಯ ಕಥೆ ಹಾಗೂ ವ್ಯಥೆ ಅಂದ್ರೆ ತಪ್ಪಾಗಲ್ಲ. ಅದು ಬರೀ ಸಿನಿಮಾ ಮಂದಿಗಷ್ಟೇ ಅಲ್ಲ, ಇಷ್ಟ ಪಟ್ಟು ಮಾಡೋ ಯಾವುದೇ ಕಾರ್ಯ ಆಗಿರಲಿ, ಅದನ್ನ ಸಾಕಾರಗೊಳಿಸೋಕೆ ಏನೆಲ್ಲಾ ಅಡೆ ತಡೆಗಳು ಎದುರಾಗುತ್ವೆ ಅನ್ನೋದರ ಜರ್ನಿ ಆಗಿದೆ. ಒಳ್ಳೆಯ ಕಥೆ, ಪಾತ್ರಗಳು, ಮೇಕಿಂಗ್ ನಿಂದ ಕಡಿಮೆ ಬಜೆಟ್​​ನಲ್ಲಿ ಬೆಸ್ಟ್ ಸಿನಿಮಾ ನೀಡಿದ್ದಾರೆ ಸಂದೇಶ್ ಪ್ರೊಡಕ್ಷನ್ಸ್​​ನ ಸಂದೇಶ್.

ಶೆಟ್ರ ಸಿನಿಮಾಗಳು ಅಂದ್ರೆ ಅಲ್ಲಿ ಕೊಡೋ ಕಾಸಿಗೆ ಯಾವುದೇ ಮೋಸವಿಲ್ಲ ಗುರು ಅಂತ ಎಲ್ರೂ ಮಾತನಾಡಿಕೊಳ್ಳೋ ರೇಂಜ್​ಗೆ ಈ ಸಿನಿಮಾ ಇದೆ. ರಕ್ಷಿತ್​ರ 777 ಚಾರ್ಲಿಯಂತೆ ಸದ್ಯ ರಿಷಬ್​ರ ಗಿರಿಕಥೆಯೂ ಸದ್ದು ಮಾಡ್ತಿದೆ. ಇದು ಗಿರಿತ್ರಿಯರ ಗುರಿಯ ಕಥೆಯೂ ಹೌದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES