Saturday, April 27, 2024

24 ಗಂಟೆಯಲ್ಲಿ 2ಲಕ್ಷ28 ಸಾವಿರ ಕೊರೋನ ಪ್ರಕರಣ; ಬ್ರೆಜಿಲ್​ ದಾಖಲೆ

ರಿಯೊ ಡಿ ಜನೈರೊ (ಬ್ರೆಜಿಲ್): ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್​ನಲ್ಲಿ 2,28,954 ಕೊರೋನ ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಬ್ರೆಜಿಲ್ ದಾಖಲೆಯನ್ನೇ ಸೃಷ್ಟಿಸಿದೆಯೆಂದು ಹೇಳಬಹುದು. ಈ ಮೂಲಕ ಬ್ರೆಜಿಲ್​ನಲ್ಲಿ ಕೊರೋನ ಪೀಡಿತರ ಸಂಖ್ಯೆ 24.7 ಮಿಲಿಯನ್​ಗೆ ಏರಿದೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಸಚಿವಾಲಯ ಗುರುವಾರ ತಡರಾತ್ರಿ ತಿಳಿಸಿದೆ.

ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 672ರಿಂದ 6,25,000 ಕ್ಕೆ ಏರಿದೆಯೆಂದು ಹೇಳಲಾಗಿದೆ. ಇತರ ಹಲವು ದೇಶಗಳಂತೆಯೇ ಬ್ರೆಜಿಲ್ ಸಹ ಕೊವಿಡ್​ನ ರೂಪಾಂತರಿ ಒಮಿಕ್ರಾನ್​ ಅಲೆಯನ್ನು ಎದುರಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್​ 11, 2020ರಂದು ಕೊವಿಡ್ 19ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ನಂತರ ಇಲ್ಲಿಯವರೆಗೆ ವಿಶ್ವದಾದ್ಯಂತ 365.26 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ. 5.63 ಮಿಲಿಯನ್​ಗಿಂತಲೂ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್​ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

RELATED ARTICLES

Related Articles

TRENDING ARTICLES