Saturday, April 27, 2024

ಪಿಎಮ್ ಭದ್ರತಾ ವೈಫಲ್ಯ ; ಯಾರು ಹೊಣೆ ?

ಪಿಎಮ್ ಭದ್ರತೆ ಎಂದರೆ ಬರಿ ಬಾಯ್ ಮಾತೇ…! ಅದಕ್ಕಿದೆ ಒಂದು ಪದ್ಧತಿ.. ಹೆಚ್ಚುಕಮ್ಮಿ ಆದ್ರೆ ಎಲ್ಲಾ ರದ್ಧತಿ

ಆ ಘಟನೆ ದೇಶವೇ ತಲೆ ತಗ್ಗಿಸುವಂತಹದ್ದು. ದೇಶದ ಇತಿಹಾಸದಲ್ಲಿಯೇ ಎಂದು ನಡೆಯದ ಘಟನೆ ಪಂಜಾಬ್ ನಲ್ಲಿ ನಡೆದು ಹೋಯ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪಂಜಾಬ್​​ನಲ್ಲಿ ಪ್ರತಿಭಟನಾಕಾರ ತಡೆಯುವ ಮೂಲಕ ದೇಶ ಯಾವತ್ತು ಕಾಣದ ಸನ್ನಿವೇಶವನ್ನು ಕಾಣುವಂತಾಯಿತು. ಸರಿ ಸುಮಾರು 20 ನಿಮಿಷಗಳ ಕಾಲ ಫಿರೋಜ್‌ಪುರ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದರು. ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ್ಯಾಲಿ ಕೂಡ ರದ್ದಾಯಿತು ಹಾಗೂ ಗೃಹ ವ್ಯವಹಾರಗಳ ಸಚಿವಾಲಯವು ಪ್ರಧಾನಿಯವರ ಭದ್ರತೆಯ ವಿಷಯದಲ್ಲಿ ಪಂಜಾಬ್ ಸರಕಾರ ಮುತುವರ್ಜಿ ವಹಿಸಿದೆಯೇ ಅತ್ಯಂತ ದೊಡ್ಡ ಲೋಪವೆಸಗಿದೆ ಎಂಬುದಾಗಿ ಅಸಮಾಧಾನ ವ್ಯಕ್ತವಾಗಿತ್ತು.

ದೇಶದ ಪ್ರಧಾನಿ ಪಾಕಿಸ್ತಾನದ ಗಡಿಯಿಂದ 18 ಕಿಲೋಮೀಟರ್‌ ದೂರದಲ್ಲಿ ಸೇತುವೆ ಮೇಲೆ 20 ನಿಮಿಷ ವಾಹನಗಳು ಮತ್ತು ಜನ ಜಂಗುಳಿಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರು. ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಹೋದಾಗ ಯಾವ ರೀತಿಯಲ್ಲಿ ಭದ್ರತೆ ಇರಬೇಕು ಎನ್ನುವುದು ಸ್ಪಷ್ಟವಾಗಿದೆ. ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ನ ನಿಯಮಗಳು ಇರುವ ‘ಬ್ಲ್ಯೂಬುಕ್‌’ನಲ್ಲಿ ಸ್ಪಷ್ಟಾಗಿ ಹೇಳಲಾಗಿದೆ. ಎಸ್‌ಪಿಜಿ, ಕೇಂದ್ರೀಯ ತನಿಖಾ ದಳ, ರಾಜ್ಯ ಪೊಲೀಸರು, ಹಾಗೂ ಸ್ಥಳೀಯ ಜಿಲ್ಲಾಧಿಕಾರಿಗಳ ಕರ್ತವ್ಯ ಏನು ಎಂದು ತಿಳಿಸಲಾಗಿದೆ.
ಹೀಗಿದ್ದರೂ ಯಾಕಿಲ್ಲಿ ಅಚಾತುರ್ಯವಾಯ್ತು..? ಅಲ್ಲಿ ಸ್ಥಳೀಯ ಪೊಲೀಸರ ಹೊಣೆಗೇಡಿತನ ಇತ್ತೇ ಅಥವಾ ಸ್ಪೆಷಲ್‌ ಪ್ರೊಟೆಕ್ಷನ್‌ ಕಡೆಯಿಂದ ಆದ ಪ್ರಮಾದವೆ..? ಎಂದು ದೇಶದಲ್ಲಿ ಜನರಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಮಾಡೋದಕ್ಕೆ ಒಂದಿಷ್ಟು ಇತಿಮಿತಿ ಎನ್ನುವದು ಬೇಕು. ಅದು ಬಿಟ್ಟು ಹೋದರೆ ರಾಜಕೀಯವೂ ಸಹ ಹುಡುಗಾಟ ಎನ್ನುವದರಲ್ಲಿ ಎರಡು ಮಾತಿಲ್ಲ.

ವಾಸ್ತವದಲ್ಲಿ ನಡೆದಿದ್ದೇನು? : 

ಅಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಂಜಾಬ್‌ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಫಿರೋಜ್‌ಪುರಕ್ಕೆ ಹೋರಟಿದ್ರು. ಅದಕ್ಕೆ ದಿಲ್ಲಿಯಿಂದ ವಾಯುಸೇನೆ ವಿಶೇಷ ವಿಮಾಣದ ಮೂಲಕ ಭಟಿಂಡಾ ಏರ್‌ಬೇಸ್‌ಗೆ 10:30ಕ್ಕೆ ಬಂದಿಳಿದ್ದರು. ಅಸಲಿಗೆ ಪ್ರಧಾನ ಮಂತ್ರಿಗಳು ಬಂದಾಗ ಅವರ ಸ್ವಾಗತಕ್ಕೆ ಸ್ವತಃ ಆಯಾ ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬರಬೇಕು ಇದು ವಾಡಿಕೆ. ಆದರೆ ಇಲ್ಲಿ ಪ್ರಧಾನಿಯನ್ನು ಸ್ವಾಗತಿಸಿಸಲು ಪಂಜಾಬ್ ಹಣಕಾಸು ಸಚಿವ ಮನಪ್ರೀತ್‌ ಬಾದಲ್‌ ಭಟಿಂಡಾಗೆ ಬಂದಿದ್ದರು. ನಂತರ ಭಟಿಂಡಾದಿಂದ ಫಿರೋಜ್‌ಪುರದ ಹತ್ತಿರ ಇರುವ ಹುಸೇನಿವಾಲಾದ ರಾಷ್ಟ್ರೀಯ ಹುತಾತ್ಮ ಸ್ಮಾರಕಕ್ಕೆ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿದ್ದ ಪ್ರಧಾನಿ ಮೋದಿ ಅವರಿಗೆ ಹವಾಮಾನದ ವೈಪರೀತ್ಯ ಕಾಡಿತ್ತು. ಹಾಗಾಗಿ 30 ನಿಮಿಷ ಕಾದ ಬಳಿಕವೂ ವಾತಾವರಣ ತಿಳಿಯಾಗದ ಕಾರಣ ಪ್ರಧಾನಿಯನ್ನು ಪರ್ಯಾಯ ರಸ್ತೆ ಮಾರ್ಗದಲ್ಲಿ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರು. ಸ್ವತಃ ಪಂಜಾಬ್‌ನ ಡಿಜಿ ಇದಕ್ಕೆ ಒಪ್ಪಿಗೆ ಸಹ ಕೊಟ್ಟಿದ್ದರು.
ಪ್ರಧಾನಿ ಮೋದಿ ಅದೇ ರಸ್ತೆ ಮೇಲೆ ಹೋಗುತ್ತಾರೆ ಎನ್ನುವುದು ಖಾತ್ರಿಯಾಗಿತ್ತು. ಆದಾಗ್ಯೂ ಹುಸೇನಿವಾಲಾದ 15 ಕಿಲೋಮೀಟರ್‌ ದೂರದಲ್ಲಿ ರೈತರನ್ನು ರಸ್ತೆಯಿಂದ ತೆರವುಗೊಳಿಸಿ ದಾರಿಯನ್ನು ಕ್ಲಿಯರ್‌ ಮಾಡಬೇಕಿತ್ತು. ಆದರೆ ಈ ಕೇಲಸ ಆಗಿರಲೇ ಇಲ್ಲ. ಅದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಮೂಲ ಕಾರಣ ಎನ್ನಲಾಗಿದೆ. ನಿಯಮದಂತೆ ಪ್ರಧಾನಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಮಾಡ್ತಾರೆ ಎಂದಾಗ ಆ ಪ್ರದೇಶದಲ್ಲಿ ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಳ್ಳುವುದು ಸ್ಥಳೀಯ ಪೊಲೀಸರ ಕೆಲಸ. ಅಲ್ಲಿ ಭಾರೀ ಲೋಪವಾಗಿದ್ದಂತು ಹೌದು. ಈ ಲೋಪ ಆಗಿದ್ದು ರಾಜಕೀಯ ಕಾರಣಕ್ಕೊ ಅಥವಾ ಕೊನೆ ಕ್ಷಣದ ಸಮನ್ವಯದ ಕೊರತೆಯೋ ಎನ್ನುವು ಕುರಿತು ತನಿಖೆಯಾಗಬೇಕಷ್ಟೆ.

ಹೊಣೆ ಯಾರು..? : 

ಹದಗೆಟ್ಟ ಹವಾಮಾನದಿಂದಾಗಿ ಪ್ರಧಾನಿಯವರು ರಸ್ತೆಯ ಮೂಲಕ ಸಂಚರಿಸುವ ಅನಿವಾರ್ಯ ಉಂಟಾಗಿತ್ತು. ತಕ್ಷಣ ಸಂಪೂರ್ಣ ರಸ್ತೆಯ ಸ್ವಚ್ಛತೆ, ಅಡೆತಡೆಗಳ ನಿವಾರಣೆ ಇತ್ಯಾದಿಗಳ ಸಂಬಂಧಪಟ್ಟ ಕೆಲಸಗಾರರನ್ನು ನೇಮಿಸುವುದು ಸ್ಥಳೀಯ ಪೊಲೀಸರ ಜವಾಬ್ದಾರಿಯಾಗಿರುತ್ತದೆ. ಈ ಕೆಲಸಕ್ಕೆ ಸ್ಥಳೀಯ ಆಡಳಿತ ಹಾಗು ಸರಕಾರಿಯಂತ್ರವನ್ನು ಬಳಸಿಕೊಳ್ಳಬಹುದು. ಇದರೊಂದಿಗೆ ಮಾರ್ಗದ ಸಂಪೂರ್ಣ ಭದ್ರತೆಯೂ ಆಯಾ ಸ್ಥಳೀಯ ಪೊಲೀಸ್ರದ್ದೆ. ಮಾರ್ಗದ ಭದ್ರತೆಯ ಕುರಿತು ಸ್ಥಳೀಯ ಪೊಲೀಸರಿಂದ ದೃಢೀಕರಣ ಪಡೆದ ನಂತರವೇ SPG ಯವರು ಪ್ರಧಾನಿ ಪ್ರಯಾಣಕ್ಕೆ ಅನುಮತಿ ನೀಡಬೇಕಾಗುತ್ತದೆ. ತರ್ತಾಗಿ ಉಂಟಾದ ಪರಸ್ಥಿತಿಯನ್ನು ಸಮರ್ಥಕವಾಗಿ ನಿಭಾಯಿಸಿ ಪ್ರಧಾನಿ ಮೋದಿಯನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸಲು ಯಾವುದೇ ಅಭ್ಯಂತರ ಇರುವುದಿಲ್ಲ ಎನ್ನುವ ಖಾತ್ರಿಯನ್ನು ಪೊಲೀಸ್ರು ತಿಳಿಸಿದ್ದರು.

ಪ್ಲಾನ್ ಬದಲಾದಾಗ ಏನ ಮಾಡ್ತಾರೆ..?

ಪ್ರಧಾನಿ ಸೇರಿದಂತೆ ದೇಶದ ಪ್ರಮುಖ ವ್ಯಕ್ತಿಗಳ ಕಾರ್ಯಕ್ರಮ, ಪ್ರವಾಸ ಇತ್ಯಾದಿಗಳನ್ನು ಮುಂಚಿತವಾಗಿಯೇ ಪ್ಲಾನ್ ಮಾಡಲಾಗುತ್ತದೆ. ಒಂದೊಮ್ಮೆ ಏನಾದರೂ ಬದಲಾವಣೆ ಆದ್ರೂ ಅದಕ್ಕೆಂದೆ ಬೇರೆ ಯೋಜನೆಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಹವಾಮಾನ ವರದಿಯನ್ನು ಗಮನಿಸುತ್ತಲೇ ಇರಲಾಗುತ್ತದೆ. ಒಂದು ವೇಳೆ ಹವಾಮಾನದಲ್ಲಿ ವೈಪರಿತ್ಯ ಕಂಡಾಗ ತಲುಪಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಇದ್ದಾಗ, ರಸ್ತೆಯ ಮೂಲಕ ಪರ್ಯಾಯ ಮಾರ್ಗವನ್ನು ಮುಂಚಿತವಾಗಿ ಪ್ಲಾನ್ ಮಾಡಿಕೊಂಡಿರಲಾಗುತ್ತದೆ.

ಪಿಎಮ್ ಭದ್ರತೆ ಹೇಗೆ..?

ಈಗಾಗಲೇ ತಿಳಿಸಿದಂತೆ ಪ್ರಧಾನ ಮಂತ್ರಿಯವರ ಭದ್ರತೆ ಕಲ್ಪಿಸುವುದು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳ ಜವಾಬ್ದಾರಿ. ಯೋಜಿತ ಭೇಟಿಗೆ ಮೂರು ದಿನಗಳ ಮುನ್ನ ಪ್ರಧಾನ ಮಂತ್ರಿಯವರ ಭದ್ರತೆಗೆ ಜವಬ್ದಾರರಾಗಿರುವ ವಿಶೇಷ ರಕ್ಷಣಾ ಗುಂಪು (SPG) ಆಯಾ ಸ್ಥಳಕ್ಕೆ ಬರುತ್ತದೆ. SPG ಅಧಿಕಾರಿಗಳು, ಸಂಬಂಧಿತ ರಾಜ್ಯದಲ್ಲಿರುವ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿಗಳು, ರಾಜ್ಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿತ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಳಗೊಂಡಂತೆ ಈವೆಂಟ್ ಅನ್ನು ಭದ್ರಪಡಿಸುವಲ್ಲಿ ತೊಡಗಿರುವ ಪ್ರತಿಯೊಬ್ಬರೊಂದಿಗೆ ಕಡ್ಡಾಯ ಮುಂಗಡ ಭದ್ರತಾ ಸಂಪರ್ಕವನ್ನು (ASL) ಮಾಡುತ್ತದೆ.
ಕಾರ್ಯಕ್ರಮದ ಪೂರ್ವ ತಯಾರಿ, ಸ್ಥಳೀಯ ವ್ಯವಸ್ಥೆ, ಅಕ್ಕ ಪಕ್ಕದ ಚಕ್ಬಂದಿ, ಸೇರಿದಂತೆ ಪತ್ರಿ ವಿಷಯಗಳನೊಗೊಂಡ ಪ್ರತಿ ನಿಮಿಷದ ವಿವರ ಹಾಗೂ ಅಗತ್ಯ ಭದ್ರತಾ ವ್ಯವಸ್ಥೆಗಳ ಕುರಿತು ಅಧಿಕಾರಿಗಳಲ್ಲಿ ಚರ್ಚಿಸಲಾಗುತ್ತದೆ. ಸಭೆ ಮುಗಿದ ನಂತರ ASL ಒಂದು ವರದಿಯನ್ನು ಸಿದ್ಧಪಡಿಸುತ್ತದೆ. ಆ ವರದಿಗೆ ಸಭೆಗೆ ಹಾಜರಾದವ ಪ್ರಮುಖ ಅಧಿಕಾರಿಗಳು ವರದಿಗೆ ಸಹಿ ಹಾಕುತ್ತಾರೆ. ಪ್ರಸಕ್ತ ವರದಿ ಆಧರಿಸಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಕಾರ್ಯಕ್ರಮ ನಡೆಯುವ ಸ್ಥಳದ ಭದ್ರತೆ : 

ಆಗಮನ, ನಿರ್ಗಮನ ಸ್ಥಳಕ್ಕೆ ಬರುವವರ ಪರಿಶೀಲನೆ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳನ್ನು ಇರಿಸುವಂತಹ ಅಂಶಗಳನ್ನು ಭದ್ರತಾ ಪರಿಶೀಲನೆ ಮಾಡ ಬೇಕಾಗಿರುತ್ತದೆ. ವೇದಿಕೆಯ ನಿರ್ಮಾಣ ಸ್ಥಿರತೆಯನ್ನು ಸಹ ಪರಿಶೀಲಿಸಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮ ನಡೆಯುವ ಆಸು ಪಾಸು ಅಗ್ನಿ ಸುರಕ್ಷತೆಯನ್ನೂ ಮೇಲ್ವಿಚಾರಣೆ ಮಾಡಲಾಗುತ್ತದೆ. ಆ ದಿನದ ಹವಾಮಾನ ವರದಿ ಕುರಿತು ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗುತ್ತಾರೆ. ಪಿಎಮ್ ಕಾರ್ಯಕ್ರಮ ನಡೆಯುವ ಸ್ಥಳವನ್ನು ತಲುಪಲು ರೂಟ್ , ಮಾರ್ಗಸೂಚಿಗಳ ಅಗತ್ಯವಿದ್ದಲ್ಲಿ ಅವುಗಳ ಕ್ರಿಯಾತ್ಮಕವಾಗಿ ತಯಾರಿಸುವಂತೆ ಸಿದ್ಧತೆ ಮತ್ತು ಸುರಕ್ಷತೆಯ ಪ್ರಮಾಣಪತ್ರದಲ್ಲಿ ಅಧಿಕೃತವಾಗಿ ತಿಳಿಸಬೇಕಾಗುತ್ತದೆ. ಇನ್ನು ಪ್ರಧಾನಿಯವರು ಪ್ರಯಾಣಿಸುವ ಮಾರ್ಗದಲ್ಲಿ ಯಾವುದೇ ತೊಂದರೆಗಳು, ಸವಾಲುಗಳಿದ್ದರೆ ಅದನ್ನು ಕೂಡಲೇ ನಿವಾರಿಸುವಂತೆಯೂ ಪೂರ್ವ ಸೂಚಿಯಾಗಿ ತಿಳಿಸಲಾಗುತ್ತದೆ.

ಸಭೆಯ ಸಂದರ್ಭದಲ್ಲಿ ಏನೆಲ್ಲಾ ಮಾಡಬೇಕು :

ಪ್ರಧಾನಿಯವರ ಭೇಟಿಯು ಅಂತಿಮವಾಗಿ ತೀರ್ಮಾನವಾದ ಬಳಿಕ ಈಗಾಗಲೇ ಹೇಳಿದ ಎಲ್ಲಾ ವ್ಯವಸ್ಥೆಗಳನ್ನು ಚಾಚು ತಪ್ಪದೆ ಮಾಡಲಾಗುತ್ತದೆ. ಅದಾದ ಬಳಿಕ ಸುರಕ್ಷತೆಗೆ ಅನುಗುಣವಾಗಿ ಪ್ರವಾಸ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ. ನಿಯೋಜಿತ ವಿಐಪಿ ಯಾವ ಮಾರ್ಗದ ಮೂಲಕ ಬರ್ತಾರೆ ಎನ್ನುವ ಖಚಿತತೆ ಕುರಿತು ಚರ್ಚೆ ನಡೆಸಲಾಗುತ್ತದೆ. ನಂತರ ತಮ್ಮ ಕಾರ್ಯಕ್ರಮದ ಸ್ಥಳವನ್ನು ಹೇಗೆ ತಲುಪುತ್ತಾರೆ ( ಸಾಮಾನ್ಯವಾಗಿ ಹೆಲಿಕಾಪ್ಟರ್ ಅಥವಾ ರಸ್ತೆ) ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದನ್ನು ಯೋಜಿಸುವಾಗ, ಕೇಂದ್ರೀಯ ಏಜೆನ್ಸಿಗಳು ಮತ್ತು ಸ್ಥಳೀಯ ಗುಪ್ತಚರ ಘಟಕದ ಗುಪ್ತಚರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಅನಿರೀಕ್ಷಿತ ಘಟಣೆಗಳಿಗೇನು ಕ್ರಮ..?
ನಿಯೋಜಿತ ಕಾರ್ಯಕ್ರಮದಲ್ಲಿ ಏನಾದರು ಅನಿರೀಕ್ಷಿತ ಘಟಣೆಗಳು ನಡೆಯವು ಸಾಧ್ಯತೆಗಳು ಇರುತ್ತವೆ. ಯಾವುದೇ ಕ್ಷಣದಲ್ಲಿಯಾದರೂ ಪ್ರತಿಭಟನೆಗಳು ನಡೆಯಬಹುದು ಅತವಾ ಪ್ರತಿರೋಧದ ಬೆದರಿಕೆ ಇತ್ಯಾದಿಗಳು ಬರಬುದು. ಅದೇಲ್ಲವನ್ನು ತಡೆಯಲು ರಾಜ್ಯ ಪೊಲೀಸರು ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎನ್ನುವ ಅಂಶಗಳನ್ನು ಮೋದಲೆ ನಿರ್ಧರಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸ್ಥಳೀಯ ಗುಪ್ತಚರ ದಳದವರು ಸ್ಥಳೀಯವಾಗಿ ಯಾವ ಯಾವ ಗುಂಪುಗಳು ಸಕ್ರಯವಾಗಿವೆ..? ಏನಾದರು ಪ್ರತಿಭಟನೆಯ ರೂಪರೇಶೆ ಸಿದ್ಧಪಡಿಸಿದ್ದಾರೆಯೇ..? ಅನಿರಿಕ್ಷಿತವಾಗಿ ಏನಾದರೂ ಅಹಿತಕರ ಘಟಣೆ ನಡೆಯಲು ಆಸ್ಪದ ಇದೇಯೇ..? ಆತಹರ ಏನಾದರು ಘಟನೆಗಳು, ಸಂಚು ನಡೆಯುಬಹುದೇ ಎಂದು ಎಚ್ಚರಿಕೆ ವಹಿಸಬೇಕಾಗುತ್ತದೆ. ಗುಪ್ತಚರ ಇಲಾಖೆ ಕೊಟ್ಟಿರುವ ವರದಿಯ ಆಧಾರಿಸಿ ಮುಂದೆ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಕ್ರಮ ರೂಪಿಸಿಕೊಳ್ಳಬೇಕಾಗುತ್ತದೆ.

ಸ್ಥಳೀಯ ಪೊಲೀಸರ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಸಂಭಾವ್ಯ ಪ್ರತಿಭಟನಾಕಾರರ ಪಟ್ಟಿ ಇರುತ್ತದೆ. ಅವರನ್ನು ಮುಂಚಿತವಾಗಿ ಪಡೆದು ಪರಿಶೀಲಿಸಿ ಪ್ರತ್ಯೇಕವಾಗಿ ಕ್ರಮಕ್ಕೆ ಸಿದ್ಧತೆ ಮಾಡಲಾಗುತ್ತದೆ. ಇಂತಹ ಮಾಹಿತಿಯನ್ನು ಸಂಗ್ರಹಿಸಲು ಭೌತಿಕ ಮತ್ತು ಎಲೆಕ್ಟ್ರಾನಿಕ್ ಕಣ್ಗಾವಲು ಎರಡನ್ನೂ ಉಪಯೋಗಿಸಲಾಗುತ್ತದೆ. ಒಂದು ವೆಳೆ ಯೋಜಿತ ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ಅಸರ್ಥರಾದಲ್ಲಿ ಪ್ರಧಾನಿಯವರು ಹೋಗುವ ನಿಯೋಜಿತ ಮಾರ್ಗ ತಪ್ಪಿಸಲಾಗುತ್ತದೆ. ಕಾರ್ಯಕ್ರಮ ನಡೆಯುವ ಸ್ತಳಕ್ಕೆ ಶಸ್ತ್ರ ಸಜ್ಜಿತ ಕಾವಲು ಪಡೆಯ ಸರ್ಪಗಾವಲು ಸಿದ್ಧಪಡಿಸಿ ಸಂಭವನೀಯ ಅವಾತರಗಳ ತಪ್ಪಿಸಲಾಗುತ್ತದೆ.

ಜನಸಂದಣಿಯ ಸಮೀಪಕ್ಕೆ ತೆರಳಬೇಕಾದ ಪರಸ್ಥಿತಿ ನಿಭಾಯಿಸುವುದು ಹೇಗೆ?

ಸಾರ್ವಜನಿಕ ಸಭೆಗಳು, ರ್ಯಾಲಿಗಳು ಮತ್ತು ರೋಡ್ ಶೋ ಇತ್ಯಾದಿ ನಡೆಯುವ ಸಂದರ್ಭದಲ್ಲಿ ಪೊಲೀಸರನ್ನು ಹೊರತುಪಡಿಸಿ, ಭದ್ರತೆಗಾಗಿ ಮೌಫ್ತಿಯಲ್ಲಿ (ಸಾಮಾನ್ಯ ಬಟ್ಟೆಯಲ್ಲಿ) ಎಸ್‌ಪಿ ಮಟ್ಟದ ಅಧಿಕಾರಿ ಸೇರಿದಂತೆ ಕೆಲವರನ್ನು ಸಾರ್ವಜನಿಕರ ಮಧ್ಯ ನಿಯೋಜಿಸಲಾಗುತ್ತದೆ. ರ್ಯಾಲಿಗಳ ಸಮಯದಲ್ಲಿ ನಾಯಕರುಗಳು ಸಮವಸ್ತ್ರಧಾರಿ ಅಧಿಕಾರಿಗಳಿಂದ ಸುತ್ತುವರಿಯಲು ಬಯಸುವುದಿಲ್ಲ. ಆದರೆ ಅವರನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲಾಗುತ್ತದೆ. ಒಮ್ಮೊಮ್ಮೆ ಪಕ್ಷದ ಕಾರ್ಯಕರ್ತರ ದಿರಿಸಿನಲ್ಲಿ ಕೂಡ ನಿಯೋಜಿಸಲಾಗುತ್ತದೆ. ಇದ್ಯಾವುದು ಸಾರ್ವಜನಿಕರಿಗೆ ತಿಳಿದಿರುವುದೇ ಇಲ್ಲಾ.

ಇಷ್ಟೇಲ್ಲಾ ಜವಾಬ್ದಾರಿ ವಹಿಸಿದ ಮೇಲೆ ಪ್ರಧಾನಿ ಅಥವಾ ರಾಷ್ಟ್ರಪತಿಗಳನ್ನು ನಿಯೋಜಿತ ಕಾರ್ಯಕ್ರಮದ ಸ್ಥಳಕ್ಕೆ ಕರೆದು ತರಲಾಗುತ್ತಿದೆ.. ಒಂದು ವೇಳೆ ಏನಾದರು ಅಹಿತಕರ ಘಟನೆಯ ಸುಳಿವು ಸಿಕ್ಕರೂ ಏನೆಲ್ಲಾ ಪ್ಲಾನ್ ಮಾಡಲಾಗಿತ್ತೂ ಎಲ್ಲವನ್ನು ರದ್ದು ಪಡಸಿ ಕೆಲವು ಗೌಪ್ಯ ಪ್ಲಾನ್ಗಳನ್ನು ತಕ್ಷಣದಲ್ಲಿ ರೂಪಿಸಿಕೊಳ್ಳಳಾಗುತ್ತದೆ. ಇಷ್ಟೆಲ್ಲಾ ಮುಂಜಾಗೃತೆ ಇದ್ದರೂ ಪ್ರಧಾನ ನರೇಂದ್ರ ಮೋದಿಯವರ ಪಂಜಾಬ್ ಕಾರ್ಯಕ್ರಕ್ಕೆ ಅಡ್ಡಿಯಾಗಿದ್ದು ಅಸಹ್ಯಕರವೇ..?

ಅದರಲ್ಲಿ ಯಾರದೇ ತಪ್ಪಿರಲಿ ಅದು ತನಿಖೆಯಿಂದ ಗೊತ್ತಾಗುವುದು. ತಪಿತಸ್ಥರಿಗೆ ಕಾನೂನಿಲ್ಲಿ ಅದೇನೂ ಶಿಕ್ಷೆ ಇದೇಯೂ ಅದನ್ನು ನೀಡಲಾಗುವುದು.. ಆದರೆ ದೇಶದ ಇತಿಹಾಸದಲ್ಲಿ ಈ ತರಹದ ಘಟನೆಗಳು SPG ಯ ಬೇಜವಾಬ್ದಾರಿಯಿಂದಲೊ ಅಥವ ಅವರಿಗೆ ಪಿಎಮ್ ಭದ್ರತೆಯ ವಿಷಯದಲ್ಲಿರುವ ಉದಾಸೀನತೆಯಿಂದಲೂ ಹಿಂದೆಯೂ ಹಲವು ಬಾರಿ ನಡೆದಿದೆ. ಬಿಜೆಪಿಯ ಸರ್ಕಾರವಿರುವ ಯೋಗಿ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ SPG ಹಲವು ಬಾರಿ ಪ್ರಧಾನಿ ಭದ್ರತೆಯ ವಿಷಯದಲ್ಲಿ ಎಡವಿದೆ. ಹಿಂದೊಮ್ಮೆ ಮೋದಿ ಇದೇ ಉತ್ತರ ಪ್ರದೇಶದಲ್ಲಿ ಸಿಂಗಲ್ ಎಂಜಿನ್ ಫ್ಲೈಟ್​ನಲ್ಲಿ ಕುಳಿತು ಜನರೆಡೆಗೆ ಕೈ ಬೀಸಿ ಆಗಸಕ್ಕೇರಿದ್ದರು. SPG ಭದ್ರತೆಯ ಪ್ರಕಾರ ಪ್ರಧಾನಿ ಸಿಂಗಲ್ ಎಂಜಿನ್ ವಿಮಾನದಲ್ಲಿ ಕೂರುವಂತೆಯೇ ಇಲ್ಲ. ಇದೊಂದೇ ಅಲ್ಲ, ಪ್ರಧಾನಿ ಕಾರಿನಲ್ಲಿ ಪ್ರಯಾಣಿಸುವಾಗ ಅವರ ಕಾರಿನಲ್ಲಿ ಡ್ರೈವರ್ ಬಿಟ್ಟು ಬೇರಾರೂ ಇರುವಂತೆಯೇ ಇಲ್ಲ. ಆದರೆ ಉತ್ತರಪ್ರದೇಶದಲ್ಲಿ ಮೋದಿ ಕಾರಿನಲ್ಲಿ ಪ್ರಯಾಣಿಸುವಾಗ ಅವರ ಕಾರಿನೊಳಗಿಂದಲೇ ಮೋದಿ ಒಳಗೊಂಡಂತೆ ವಿಡಿಯೋ ಮಾಡಲಾಗಿತ್ತು.

ಹೀಗೆ ಹಲವಾರು ಬಾರಿ SPG ಭದ್ರತಾ ಲೋಪವನ್ನು ಎಸಗಿದ್ದರೂ ಈ ಬಾರಿ ಮಾತ್ರ ವಿರೋಧ ಪಕ್ಷವಾದ ಕಾಂಗ್ರೆಸ್ ಪಂಜಾಬಿನಲ್ಲಿ ಅಧಿಕಾರದಲ್ಲಿರುವುದರಿಂದ ಈ ರೀತಿಯ ಅತಿರೇಕವನ್ನು ಮಾಡಲಾಗುತ್ತಿದೆಯೇ ಎನ್ನುವುದು ತನಿಖೆಯಿಂದ ಹೊರಬೀಳಬೇಕಿದೆ. ಆದರೆ ಎರಡು ಮೂರು ದಿನಗಳಲ್ಲಿ ತನಿಖೆಯ ಫಲಿತಾಂಶ ಬರುತ್ತದೆ ಎನ್ನುವುದು ತಿಳಿದೂ ಸಹ ಅತಿ ತುರ್ತಾಗಿ  ಪಂಜಾಬ್ ಪೊಲೀಸ್ ಮುಖ್ಯಸ್ಥರ ತಲೆದಂಡ ಪಡೆದಿರುವುದೂ ಸಹ ಘಟನೆಗೆ ಯಾವುದೋ ಒಂದು ಪಕ್ಷ ಹೊಣೆ ಎಂಬುದನ್ನು ಮೊದಲೇ ಹೊಣೆ ಮಾಡಲಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಈ ಘಟನೆಯ ನಿಷ್ಪಕ್ಷಪಾತ ತನಿಖೆಯ ನಂತರವಷ್ಟೇ ಇದಕ್ಕೆ ಯಾರು ಕಾರಣ ಎನ್ನುವುದು ತಿಳಿಯುತ್ತದೆ.

ಶ್ರೀನಾಥ್ ಜೋಶಿ, ಪವರ್ ಟಿವಿ

RELATED ARTICLES

Related Articles

TRENDING ARTICLES