Saturday, November 2, 2024

ಸಂಭ್ರಮದ ಎಳ್ಳಮಾಸೆ ಹಬ್ಬ ಆಚರಿಸಿದ ಸಚಿವ ಪ್ರಭು ಚವ್ಹಾಣ್

ಬೀದರ್ : ಎಳ್ಳಮವಾಸ್ಯೆಯೆಂಬ ಸುಂದರ ಹಬ್ಬದ ಬಗ್ಗೆ ಇಂದಿನ ಯುವಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ. ಅದರಲ್ಲೂ ದಕ್ಷಿಣ ಕರ್ನಾಟಕದ ಜನತೆಗೆ ಈ ಹಬ್ಬ ಅಷ್ಟಾಗಿ ಪರಿಚಿತವೇನಲ್ಲ. ಆದರೆ ಉತ್ತರ ಕರ್ನಾಟಕದ ಮಂದಿಗೆ ಮಾತ್ರ ಎಳ್ಳಮವಾಸ್ಯೆ ಹಬ್ಬವೆಂದರೆ ಅತ್ಯಂತ ಸಂಭ್ರಮದ ಹಬ್ಬ. ಇಂಥ ಸಂಭ್ರಮದ ಎಳ್ಳಮವಾಸ್ಯೆಯನ್ನು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣರವರು ಇಂದು ತಮ್ಮ ಸ್ವಗ್ರಾಮದಲ್ಲಿ ಆಚರಿಸಿ ಸಂಭ್ರಮಿಸಿದರು.

ಪ್ರಭು ಚವ್ಹಾಣ ತಮ್ಮ ಸ್ವಗ್ರಾಮವಾದ ಬೊಂತಿ ತಾಂಡಾದ ತಮ್ಮ ಹೊಲದಲ್ಲಿ ಉತ್ತರ ಕರ್ನಾಟಕದ ಎಳ್ಳಮಾಸಿ ಹಬ್ಬದ ಆಚರಣೆ ಮಾಡಿದರು. ತಮ್ಮ ಹೊಲಕ್ಕೆ ಕಾರ್ಯಕರ್ತರ ಜೊತೆಗೆ ತೆರಳಿದ ಸಚಿವರು, ಹೊಲದಲ್ಲಿ ಭಜ್ಜಿ, ಕಡುಬು, ಹೋಳಿಗೆ ಊಟದ ಜೊತೆ ಅಂಬಲಿಯನ್ನೂ ಸವಿದರು. ನಂತರ ಎಳ್ಳಮವಾಸೆ ವಾಡಿಕೆಯಂತೆ ಜೋಕಾಲಿ ಆಡುವ ಮೂಲಕ ಎಲ್ಲರ ಗಮನವನ್ನೂ ಸೆಳೆದರು.

ಏಳ್ಳಮಾವಾಸ್ಯೆ ನಿಮಿತ್ಯ ಇಂದು ತಮ್ಮ ಹೊಲದಲ್ಲಿ ಸಾಮಾನ್ಯ  ರೈತನಾಗಿ ಸಚಿವ ಪ್ರಭು ಚೌವಾಣ ಭಾಗಿಯಾಗಿದ್ದರು.ಈ ಸಂದರ್ಭದಲ್ಲಿ ತಾಂಡದ  ನಿವಾಸಿಗಳು ಸಚಿವರ ಹೊಲದಲ್ಲಿ ಉತ್ತರ ಕರ್ನಾಟಕ ಭಜಿ ಊಟದ ಸವಿಯನ್ನು ಸವಿಯುವುದರ ಜೊತೆಗೆ ಹಬ್ಬದ ಸಂಭ್ರಮವನ್ನೂ ಸವಿದರು.

RELATED ARTICLES

Related Articles

TRENDING ARTICLES