Saturday, April 27, 2024

ನೋಡಬನ್ನಿ ಕೋಡಿಬಿದ್ದ ಮೂಡಲ್ ಕುಣಿಗಲ್ ಕೆರೆ

ತುಮಕೂರು: ಮೂಡಲ್ ಕುಣಿಗಲ್ ಕೆರೆ ನೋಡೋಕ್ಕೊಂದು ವೈಭೋಗ ಪ್ರಸಿದ್ದ ಜನಪದ ಜಲ ಹಾಡನ್ನು ಎಲ್ಲರೂ ಕೇಳಿರುತ್ತೀರಿ.‌ ಅಂತಹ ಪ್ರಸಿದ್ದ ಹಾಡಿನ ಮೂಲ ಸ್ಥಳವಾದ ತುಮಕೂರು ಜಿಲ್ಲೆಯ ಕುಣಿಗಲ್​ನ ದೊಡ್ಡಕೆರೆ ಸುಮಾರು 12 ವರ್ಷಗಳ ನಂತರ ಕೋಡಿಯಾಗಿ ತುಂಬು ತುಳುಕುತ್ತಿರುವ ಸುದ್ದಿ ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಅಲ್ಲಿನ ಪರಿಸರ ಪ್ರೇಮಿಗಳಾದ ಕುಣಿಗಲ್​ನ ಸ್ನೇಹ ಪ್ರತಿಷ್ಠಾನದ ದಿನೇಶ್​ಕುಮಾರ್ ನೇತೃತ್ವದಲ್ಲಿ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.‌ ಇವರ ಜೊತೆಯಾಗಿ ಸ್ನೇಕ್ ಮಹಂತೇಶ್, ತಾರಾನಾಥ್ ಭದ್ರಾವತಿ, ಶ್ರೀಧರ್, ಮುಜೀದ್, ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆಯ ಉಮೇಶ್, ಪ್ರಸಾದ್, ಬಜರಂಗದಳದ ರಾಮು ಸೇರಿದಂತೆ ಇತರ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಈ ಕುಣಿಗಲ್ ದೊಡ್ಡಕೆರೆ ಕೋಡಿಬಿದ್ದು ಕಂಡುಬರುತ್ತಿರುವ ಜಲರಾಶಿ ಪ್ರಕೃತಿಯನ್ನು ನಾಚಿಸುವಂತಿದೆ. ನೀವು ಸಹ ಬಿಡುವಿದ್ದಾಗ ಒಮ್ಮೆ ಭೇಟಿಕೊಟ್ಟು ಸೌಂದರ್ಯವನ್ನು ಸವಿದುಬನ್ನಿ.

RELATED ARTICLES

Related Articles

TRENDING ARTICLES